ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಸ್ವಾತಂತ್ರ್ಯ ಹೋರಾಟಗಾರ ಭಗತ್‌ ಸಿಂಗ್‌ ಬಗ್ಗೆ ಅವಹೇಳನಕಾರಿ ಹೇಳಿಕೆ

ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್‌ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಸಂಸದರನ್ನು ಸಂಸದ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹಿಸಿ ಭಗತ್‌ ಸಿಂಗ್‌ ಅಭಿಮಾನಿ ಬಳಗದಿಂದ ಜಿಲ್ಲಾಧಿಕಾರಿಗಳ ಮುಖಾಂತರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಲಾಯಿತು.

ಶಿರೋಮಣಿ ಅಕಾಲಿದಳದ ಸಂಸದ ಸಿಮ್ರನ್ ಜಿತ್ ಸಿಂಗ್ ಮಾನ್ ಅವರು ಭಗತ್‌ ಸಿಂಗ್‌ ಅವರನ್ನು ಆತಂಕವಾದಿ ಎಂದು ಹೇಳಿಕೆ ನೀಡಿದ್ದಾರೆ. ಆದ ಕಾರಣ ದೇಶಭಕ್ತರಲ್ಲಿ ಮತ್ತು ಭಗತ್‌ ಸಿಂಗ್‌ರವರ ಅಭಿಮಾನಿಗಳ ಭಾವನೆಗಳಿಗೆ ಧಕ್ಕೆಯಾಗಿದೆ. ದೇಶಭಕ್ತರಿಗೆ ಅಪಮಾನ ಮಾಡಿರುವ ಅವರಿಗೆ ಕಾನೂನಾತ್ಮಕ ಶಿಕ್ಷೆಯನ್ನು ನೀಡಬೇಕು ಮತ್ತು ಅವರನ್ನು ಸಂಸದ ಸ್ಥಾನದಿಂದ ತೆಗೆದುಹಾಕಬೇಕು ಎಂದು ಭಗತ್‌ ಸಿಂಗ್‌ ಅಭಿಮಾನಿ ಬಳಗ ಒತ್ತಾಯಿಸಿದೆ.

Edited By :
PublicNext

PublicNext

25/07/2022 04:16 pm

Cinque Terre

23.04 K

Cinque Terre

0

ಸಂಬಂಧಿತ ಸುದ್ದಿ