ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯುದ್ಧ ನಿಲ್ಲಿಸುವಂತೆ ರಷ್ಯಾಗೆ ಐಸಿಜೆ ಆರ್ಡರ್ : ರಷ್ಯಾ ಹಿಂದೆ ಸರಿಯುವುದು ಡೌಟ್

ಹೇಗ್ : ರಷ್ಯಾ- ಉಕ್ರೇನ್ ಮಧ್ಯೆದ ಯುದ್ಧ ಮುಂದುವರೆದಿದೆ. ಇದರ ಮಧ್ಯೆ ಉಕ್ರೇನಿನ ಮೇಲೆ ನಡೆಸುತ್ತಿರುವ ಆಕ್ರಮಣವನ್ನು ತಕ್ಷಣ ನಿಲ್ಲಿಸಬೇಕು ಎಂದು ರಷ್ಯಾಕ್ಕೆ ಅಂತಾರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ಆದೇಶಿಸಿದೆ. ಆದರೆ ಐಸಿಜೆ ಕಲಾಪ ಬಹಿಷ್ಕರಿಸಿದ್ದ ರಷ್ಯಾ ಈ ಆದೇಶ ಪಾಲಿಸುತ್ತಾ ಎಂಬುದು ಡೌಟ್.

ಐಸಿಜೆ15 ಜನ ಸದಸ್ಯರನ್ನು ಒಳಗೊಂಡಿದ್ದು, ಸುಪ್ರೀಂ ಕೋರ್ಟಿನ ಮಾಜಿ ನ್ಯಾಯಾಧೀಶರಾದ ದಲವೀರ್ ಭಂಡಾರಿ ಭಾರತದ ಪರವಾಗಿ ಹಾಜರಿದ್ದರು. ನ್ಯಾಯಪೀಠವು 13-2 ಮತದಿಂದ, 'ರಷ್ಯಾದ ಸೇನಾ ಪಡೆಗಳು, ಹಾಗೂ ರಷ್ಯಾದಿಂದ ನಿರ್ದೇಶಿಸಲ್ಪಟ್ಟಅಥವಾ ರಷ್ಯಾ ಬೆಂಬಲಿತ ಸೇನಾ ಘಟಕಗಳು, ಸಂಘಟನೆಗಳು ಉಕ್ರೇನಿನಲ್ಲಿ ಇನ್ನು ಸೇನಾ ಕಾರ್ಯಾಚರಣೆಯನ್ನು ಮುಂದುವರೆಸುವಂತಿಲ್ಲ' ಎಂದು ಅದೇಶಿಸಿದೆ.

ಮಾರ್ಚ್ 7 ರಂದು ನ್ಯಾಯಾಲಯ ವಿಚಾರಣೆಯನ್ನು ಆರಂಭಿಸಿತ್ತು. ರಷ್ಯಾ ಮೌಖಿಕ ವಿಚಾರಣೆಯಲ್ಲಿ ಪಾಲ್ಗೊಳ್ಳಲು ನಿರಾಕರಿಸಿತ್ತು.

ಅಂತಾರಾಷ್ಟ್ರೀಯ ನ್ಯಾಯಾಲಯವು ಸವೋಚ್ಛ ನ್ಯಾಯಾಲಯವಾಗಿದ್ದು, ಇದರ ಆದೇಶ ಅಂತಿಮವಾಗಿರುತ್ತದೆ. ಇಲ್ಲಿ ಮೇಲ್ಮನವಿ ಸಲ್ಲಿಸುವ ಅವಕಾಶಗಳಿಲ್ಲ.

ವಿಶ್ವಸಂಸ್ಥೆಯ ಚಾರ್ಟರ್ ಪ್ರಕಾರ ಎಲ್ಲ ಸದಸ್ಯ ರಾಷ್ಟ್ರಗಳು ನ್ಯಾಯಾಲಯದ ಆದೇಶವನ್ನು ಪಾಲಿಸಲು ಬದ್ಧರಾಗಿರುತ್ತವೆ. ಉಕ್ರೇನ್ ಹಾಗೂ ರಷ್ಯಾ ಎರಡೂ ರಾಷ್ಟ್ರಗಳು ಈ ಚಾರ್ಟರ್ ಗೆ ಸಹಿ ಹಾಕಿವೆ. ಆದರೂ ರಷ್ಯಾ ವಿಚಾರಣೆಯಲ್ಲಿ ಪಾಲ್ಗೊಳ್ಳಲು ನಿರಾಕರಿಸಿದಂತೆ ನ್ಯಾಯಾಲಯದ ಈ ಆದೇಶವನ್ನು ಪಾಲಿಸದೇ ಇರುವ ಸಾಧ್ಯತೆಗಳೂ ಇವೆ.

Edited By : Nirmala Aralikatti
PublicNext

PublicNext

17/03/2022 11:14 am

Cinque Terre

66.53 K

Cinque Terre

0

ಸಂಬಂಧಿತ ಸುದ್ದಿ