ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯುದ್ಧಗ್ರಸ್ಥ ಉಕ್ರೇನ್‌ನಲ್ಲಿ ಇದುವರೆಗೆ 596 ಅಮಾಯಕರ ಬಲಿ: ವಿಶ್ವಸಂಸ್ಥೆ ಮಾಹಿತಿ

ಜಿನೇವಾ: ಉಕ್ರೇನ್ ಮೇಲೆ ರಷ್ಯಾ ಸೈನ್ಯ ನಡೆಸಿದ ಯುದ್ಧದ ಪರಿಣಾಮ ಇದುವರೆಗೆ ಉಕ್ರೇನ್‌ನಲ್ಲಿ 596 ಅಮಾಯಕ ನಾಗರಿಕರು ಪ್ರಾಣ ತೆತ್ತಿದ್ದಾರೆ. ಈ ಬಗ್ಗೆ ವಿಶ್ವಸಂಸ್ಥೆಯ ಮಾನವಹಕ್ಕುಗಳ ಆಯೋಗ ತನಿಖೆ ಮೂಲಕ ಅಧಿಕೃತ ಮಾಹಿತಿ ನೀಡಿದೆ.

ಸಾವನ್ನಪ್ಪಿದವರಲ್ಲಿ ಹೆಚ್ಚಿನ ನಾಗರಿಕರು ರಷ್ಯಾ ಮಿಲಿಟರಿಯ ಬಾಂಬ್ ದಾಳಿಗೆ ಬಲಿಯಾಗಿದ್ದಾರೆ ಎಂದುವಿಶ್ವಸಂಸ್ಥೆಯ ಮಾನವಹಕ್ಕುಗಳ ಆಯೋಗ ವರದಿಯಲ್ಲಿ ತಿಳಿಸಲಾಗಿದೆ. ಇದೇ ವೇಳೆ ಯುದ್ಧದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಮತ್ತು ಗಾಯಗೊಂಡವರ ಸಂಖ್ಯೆ ಇನ್ನಷ್ಟು ಹೆಚ್ಚಿರಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

Edited By : Nagaraj Tulugeri
PublicNext

PublicNext

15/03/2022 04:12 pm

Cinque Terre

46.73 K

Cinque Terre

0

ಸಂಬಂಧಿತ ಸುದ್ದಿ