ನವದೆಹಲಿ: ಬಿಜೆಪಿ-ಕಾಂಗ್ರೆಸ್ ನಡುವಿನ ವಾಕ್ಸಮರಕ್ಕೆ ಕಾರಣವಾಗಿದ್ದ ರಫೇಲ್ ಯುದ್ಧ ವಿಮಾನ ಖರೀದಿ ಹಗರಣಕ್ಕೆ ರೋಚಕ ತಿರುವು ಸಿಕ್ಕಿದೆ. 'ರಫೇಲ್ ಯುದ್ಧವಿಮಾನಗಳ ಖರೀದಿ ಒಪ್ಪಂದ ಕುದುರಿಸಲು ಫ್ರಾನ್ಸ್‌ನ ಡಾಸೋ ಏವಿಯೇಷನ್ ಕಂಪನಿಯು ಭಾರತದ ಮಧ್ಯವರ್ತಿ ಸುಶೇನ್ ಗುಪ್ತಾರ ಇಂಟರ್‌ಸ್ಟೆಲರ್ ಟೆಕ್ನಾಲಜೀಸ್‌ಗೆ ಸುಮಾರು 7.5 ಮಿಲಿಯನ್ ಯುರೋ (65 ಕೋಟಿ ರೂ.) ಲಂಚ ನೀಡಿತ್ತು ಫ್ರಾನ್ಸ್‌ನ ಮೀಡಿಯಾಪಾರ್ಟ್ ಪೋರ್ಟಲ್ ವರದಿ ಮಾಡಿದೆ.
'ಆಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣದಲ್ಲಿ ಮಧ್ಯವರ್ತಿಯಾಗಿದ್ದ ಸುಶೇನ್ ಗುಪ್ತಾಗೆ, ರಫೇಲ್ ಖರೀದಿ ಒಪ್ಪಂದದಲ್ಲೂ ಲಂಚ ನೀಡಲಾಗಿದೆ. ಈ ಹಗರಣದಲ್ಲಿ ಕಾಂಗ್ರೆಸ್ ಭಾಗಿಯಾದ ಬಗ್ಗೆ ಆರೋಪವಿತ್ತು. ಆ ಬಗ್ಗೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಬೇರೆ ದೇಶಗಳಲ್ಲಿ ಇರುವ ಕಂಪನಿಗಳು, ನಕಲಿ ಒಪ್ಪಂದಗಳು ಮತ್ತು ನಕಲಿ ಇನ್‌ವಾಯ್ಸ್‌ಗಳನ್ನು ಬಳಸಿಕೊಂಡು ಈ ಲಂಚ ಪಾವತಿ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಮಾರಿಷಸ್ ಸರ್ಕಾರವು ಸಿಬಿಐ ಮತ್ತು ಜಾರಿ ನಿರ್ದೇಶನಾಲಯಕ್ಕೆ ನೀಡಿತ್ತು. 2018ರ ಅಕ್ಟೋಬರ್ 11ರಿಂದ ಈ ದಾಖಲೆಗಳು ಲಭ್ಯವಿದ್ದರೂ ಭಾರತದ ತನಿಖಾ ಸಂಸ್ಥೆಗಳು ತನಿಖೆ ಮಾಡಲಿಲ್ಲ' ಎಂದು ಮೀಡಿಯಾಪಾರ್ಟ್ ವಿವರಿಸಿದೆ.
ಇನ್ನು ಫ್ರಾನ್ಸ್‌ನ ಮೀಡಿಯಾಪಾರ್ಟ್ ಪೋರ್ಟಲ್ ಮಾಡಿರುವ ವರದಿ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ, ರಫೇಲ್ ಯುದ್ಧ ವಿಮಾನ ಖರೀದಿಧ ವಿಚಾರದಲ್ಲಿ ಕಾಂಗ್ರೆಸ್‌ನವರು ಬಿಜೆಪಿ ಮೇಲೆ ಗೂಬೆ ಕೂರಿಸಲು ತಂತ್ರ ಹೂಡಿದ್ದರು. ಕಾಂಗ್ರೆಸ್‌ನ ಲಂಚಾವತಾರ ಮರೆಮಾಚಲು ಬಿಜೆಪಿ ಮೇಲೆ ಸಲ್ಲದ ಆರೋಪ ಮಾಡಿದ್ದರು ಎಂದಿದೆ. ಇನ್ನು ಇದು ಬಿಜೆಪಿಯೇ ಸೃಷ್ಟಿಸಿರುವ ಸುಳ್ಳು ವರದಿ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.
PublicNext
09/11/2021 10:49 pm