ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ಜಿಲ್ಲೆಯನ್ನು ರೆಡ್ ಅಲರ್ಟ್ ಎಂದು ಘೋಷಣೆ ಮಾಡಿದ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ!

ಮಧುಗಿರಿ:ತಾಲೂಕಿನ ಸೂರಗಾನಹಳ್ಳಿ ಮತ್ತು ಇಮ್ಮನಗೊಂನಹಳ್ಳಿ ಗ್ರಾಮಗಳು ಸಂಪೂರ್ಣ ಜಲಾವೃತವಾಗಿದೆ. ಇಲ್ಲಿನ ಜರನ್ನು ರಕ್ಷಣೆ ಮಾಡಿ ಸೂಕ್ತ ರೀತಿಯಲ್ಲಿ ರಕ್ಷಣೆ ಮಾಡುವ ಕಾರ್ಯ ನಡೆಸಲಾಗುತ್ತಿದೆ.

ಅವಶ್ಯಕತೆ ಇರುವಂತಹ ಎಲ್ಲಾ ಪ್ರದೇಶಗಳಲ್ಲಿಯೂ ಕಾಳಜಿ ಕೇಂದ್ರಗಳನ್ನು ಸ್ಥಾಪಿಸಲು ಜಿಲ್ಲಾಡಳಿತ ತಯಾರಿ ನಡೆಸಿದೆ. ಸರ್ಕಾರ ತುಮಕೂರು ಜಿಲ್ಲೆಯನ್ನು ಯಲ್ಲೋ ಹಲರ್ಟ್ ಗೋಷಣೆ ಮಾಡಿದ್ದರು. ಆದರೆ ಇದನ್ನು ರೆಡ್ ಹಲರ್ಟ್ ಎಂದೇ ಪರಿಗಣಿಸಿ ಕೆಲಸ ಮಾಡುತ್ತೇವೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಹೇಳಿದ್ದಾರೆ. ಕೊರಟಗೆರೆ ತುಂಬಾಡಿ ಗ್ರಾಮದಲ್ಲಿ ಜಿಲ್ಲಾಡಳಿತ ಸಿದ್ದತೆಯ ಬಗ್ಗೆ ಬುಧವಾರ ಮಾಧ್ಯಮಕ್ಕೆ ಮಾಹಿತಿ ನೀಡಿದರು.

ಒಟ್ಟು ಜಿಲ್ಲೆಯಲ್ಲಿ ಮಳೆ ಅವಘಡದಿಂದ ನಾಲ್ಕು ಜನ ಸಾವನ್ನಪ್ಪಿದ್ದು ಶಿರಾ, ಕುಣಿಗಲ್, ತುಮಕೂರು, ಪಾಗಡ ತಾಲೂಕಿನಲ್ಲಿ ಮೃತಪಟ್ಟಿದ್ದು ಎಲ್ಲ ಮೃತ ಕುಟುಂಬಕ್ಕೂ ತಲಾ 5 ಲಕ್ಷ ರೂ ಪರಿಹಾರವನ್ನು ನೀಡಲಾಗುತ್ತಿದ್ದು ಹೆಚ್ಚಿನ ಮಳೆ ಹಾನಿ ಯಾಗದಂತೆ ಕ್ರಮ ಕೈಗೊಳ್ಳುತ್ತಿದ್ದೇವೆ. ಜಿಲ್ಲೆಯಾದ್ಯಂತ ಇರುವಂತಹ ಬಹುತೇಕ ಕೆರೆ ಕಟ್ಟೆಗಳು ಕೊರಟಗೆರೆ ಮತ್ತು ಮಧುಗಿರಿ ತಾಲೂಕಿನಲ್ಲಿ ಜಯಮಂಗಲಿ ನದಿ ವ್ಯಾಪ್ತಿಗೆ ಒಳಪಡುವಂತಹ ಶಾಲಾ ಕಾಲೇಜುಗಳಿಗೆ ಅಪಾಯದ ಮುಸ್ಸೂಚನೆ ದೊರೆತರೆ ಅಂತಹ ಶಾಲೆಗಳಿಗೆ ರಜೆ ನೀಡಬಹುದಾಗಿ ಜಿಲ್ಲಾದಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ, ಎಸ್ಪಿ ರಾಹುಲ್ ಕುಮಾರ್, ತಾಲೂಕು ಪಂಚಾಯಿತಿ ಇ ಓ ದೊಡ್ಡ ಸಿದ್ದಯ್ಯ, ತಹಶೀಲ್ದಾರ್ ನಹಿದಾ ಜಂ ಜಂ ಸೇರಿದಂತೆ ಇತರರು ಇದ್ದರು.

ವರದಿ: ರಾಘವೇಂದ್ರ ದಾಸರಹಳ್ಳಿ, ಪಬ್ಲಿಕ್ ನೆಕ್ಸ್ಟ್

Edited By : Nagesh Gaonkar
PublicNext

PublicNext

03/08/2022 10:52 pm

Cinque Terre

33.3 K

Cinque Terre

0

ಸಂಬಂಧಿತ ಸುದ್ದಿ