ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕರ್ನಾಟಕ ಹೈಕೋರ್ಟ್​ಗೆ ನೂತನ ಸಿಜೆಯಾಗಿ ರಿತುರಾಜ್ ಅವಸ್ತಿ ಅಧಿಕೃತ ನೇಮಕ

ಬೆಂಗಳೂರು: ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆ)ಯಾಗಿ ರಿತುರಾಜ್ ಅವಸ್ತಿ ಅವರನ್ನು ನೇಮಿಸಿ ಅಧಿಸೂಚನೆಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ.

ಸುಪ್ರೀಂಕೋರ್ಟ್ ಶಿಫಾರಸಿನಂತೆ ಈ ಅಧಿಸೂಚನೆ ಹೊರಡಿಸಲಾಗಿದೆ. ಒಟ್ಟು 13 ರಾಜ್ಯಗಳ ಹೈಕೋರ್ಟ್​ಗಳಿಗೆ ಮುಖ್ಯ ನ್ಯಾಯಾಧೀಶರನ್ನು ನೇಮಿಸಲಾಗಿದೆ. ಗುಜರಾತ್ ಸಿಜೆಯಾಗಿ ನ್ಯಾ.ಅರವಿಂದ್ ಕುಮಾರ್, ತೆಲಂಗಾಣ ಸಿಜೆಯಾಗಿ ಸತೀಶ್ ಚಂದ್ರ ಶರ್ಮ ಅವರನ್ನು ನೇಮಕಗೊಳಿಸಲಾಗಿದೆ.

ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿ ಬಡ್ತಿ ಪಡೆದವರ ಪಟ್ಟಿ ಹೀಗಿದೆ:

* ರಾಜೇಶ್ ಬಿಂದಾಲ್: ಅಲಹಾಬಾದ್ ಹೈಕೋರ್ಟ್

* ರಂಜಿತ್ ವಿ. ಮೊರೆ : ಮೇಘಾಲಯ ಹೈಕೋರ್ಟ್

* ಸತೀಶ್ ಚಂದ್ರ ಶರ್ಮಾ : ತೆಲಂಗಾಣ ಹೈಕೋರ್ಟ್

* ಪ್ರಕಾಶ್ ಶ್ರೀವಾಸ್ತವ : ಕೊಲ್ಕತ್ತಾ ಹೈಕೋರ್ಟ್

* ಆರ್.ವಿ. ಮಲಿಮಠ್ : ಮಧ್ಯಪ್ರದೇಶ ಹೈಕೋರ್ಟ್

* ರಿತು ರಾಜ್ ಅವಸ್ತಿ : ಕರ್ನಾಟಕ ಹೈಕೋರ್ಟ್

* ಅರವಿಂದ ಕುಮಾರ್ : ಗುಜರಾತ್ ಹೈಕೋರ್ಟ್

* ಪ್ರಶಾಂತ್ ಕುಮಾರ್ ಮಿಶ್ರಾ : ಆಂಧ್ರಪ್ರದೇಶ ಹೈಕೋರ್ಟ್

Edited By : Vijay Kumar
PublicNext

PublicNext

09/10/2021 09:44 pm

Cinque Terre

69.36 K

Cinque Terre

3

ಸಂಬಂಧಿತ ಸುದ್ದಿ