ನವದೆಹಲಿ : ಅಮೆರಿಕದ ಹ್ಯೂಸ್ಟನ್‌ನಲ್ಲಿ ಕಳೆದ ವರ್ಷ ನಡೆದ 'ಹೌಡಿ ಮೋದಿ' ಕಾರ್ಯಕ್ರಮದ ಯಾವುದೇ ವೆಚ್ಚವನ್ನು ಸರ್ಕಾರ ಪಾವತಿಸಿಲ್ಲ. ಅದನ್ನು ಟೆಕ್ಸಾಸ್ ಇಂಡಿಯಾ ಫೊರಂ ಸಂಸ್ಥೆ ಆಯೋಜಿಸಿತ್ತು ಎಂದು ಸರ್ಕಾರ ಗುರುವಾರ ಸ್ಪಷ್ಟಪಡಿಸಿದೆ.
2019 ರ ಸೆಪ್ಟೆಂಬರ್ 22 ರಂದು ಹೂಸ್ಟನ್‌ನ ಕ್ರೀಡಾಂಗಣದಲ್ಲಿ ನಡೆದ 'ಹೌಡಿ ಮೋದಿ' ಕಾರ್ಯಕ್ರಮ ಸರಕಾರದ ಪ್ರಾಯೋಜಿತ ಕಾರ್ಯಕ್ರಮವಾಗಿತ್ತು. ಈ ಕಾರ್ಯಕ್ರಮದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ 50,000 ಕ್ಕೂ ಹೆಚ್ಚು ಭಾರತೀಯ-ಅಮೆರಿಕರ ಸಮ್ಮುಖದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭರ್ಜರಿ ಸ್ವಾಗತ ಸಿಕ್ಕಿತು.
ರಾಜ್ಯಸಭೆಯಲ್ಲಿ ಈ ಕುರಿತು ಕೇಳಲಾದ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿರುವ ವಿದೇಶಾಂಗ ವ್ಯವಹಾರಗಳ ಖಾತೆ ಸಹಾಯಕ ಮುರಳೀಧರನ್ ಅವರು ಅಮೆರಿಕ ಮೂಲದ ಟೆಕ್ಸಾಸ್ ಇಂಡಿಯಾ ಫೋರಂ ಐಎನ್‌ಸಿ ಸ್ವಯಂ ಸೇವಾ ಸಂಸ್ಥೆಯೇ ಇಡೀ ಕಾರ್ಯಕ್ರಮದ ವೆಚ್ಚ ನೋಡಿಕೊಂಡಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಕಳೆದ ವರ್ಷ ನಡೆದ 'ಹೌಡಿ ಮೋದಿ' ಕಾರ್ಯಕ್ರಮದ ಬಗ್ಗೆ ಲೆಕ್ಕ ನೀಡಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸಿದ್ದವು. ಇದೀಗ ಅದಕ್ಕೆ ಲಿಖಿತ ಉತ್ತರ ನೀಡುವ ಮೂಲಕ ಮುರಳೀಧರನ್ ಅವರು ಅನುಮಾನಗಳಿಗೆ ತೆರೆ ಎಳೆದಿದ್ದಾರೆ.
PublicNext
18/09/2020 10:21 am