ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸೇವೆಗೆ ಗುಡ್ ಬೈ ಹೇಳಿದ ಐಪಿಎಸ್ ಅಧಿಕಾರಿ ಬಾಸ್ಕರ್ ರಾವ್

ಬೆಂಗಳೂರು: ರೈಲ್ವೆ ಇಲಾಖೆಯ ಎಡಿಜಿಪಿ ಆಗಿದ್ದ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ತಮ್ಮ ಸೇವೆಗೆ ಈಗ ಗುಡ ಬೈ ಹೇಳಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮಾಹಿತಿ ಕೊಟ್ಟು ಈಗಾಗಲೇ ಅಧಿಕಾರ ಹಸ್ತಾಂತರಿಸಿದ್ದಾರೆ.

ಬಾಸ್ಕರ್ ರಾವ್ ಸ್ವಯಂ ನಿವೃತ್ತಿ ಕೋರಿ 2021ರ ಸೆಪ್ಟೆಂಬರ್-16 ರಂದು ಅರ್ಜಿ ಸಲ್ಲಿಸಿದ್ದರು. ಆದರೆ, ಕೇಂದ್ರ ಗೃಹ ಸಚಿವಾಲಯ ನಿರ್ಧಾರ ಪುನರ ಪರಿಶೀಲನೆಗೆ ಅವಕಾಶ ನೀಡಿತ್ತು.

ಲೆಕ್ಕದಂತೆ ಮೂರು ತಿಂಗಳಲ್ಲಿ ಗೃಹ ಸಚಿವಾಲಯ ಅಧಿಕಾರಿಯನ್ನ ಸಂಪರ್ಕಿಸಬೇಕು. ಆದರೆ ಬಾಸ್ಕರ್ ರಾವ್ ವಿಚಾರದಲ್ಲಿ 6 ತಿಂಗಳು ಕಳೆದರೂ ಗೃಹ ಸಚಿವಾಲಯ ಉತ್ತರವನ್ನೇ ಕೊಟ್ಟಿಲ್ಲ. ಈ ಕಾರಣಕ್ಕೆ ಬಾಸ್ಕರ ರಾವ್, ಆಲ್ ಇಂಡಿಯಾ ಸರ್ವಿಸ್ ಆಕ್ಟ್ 16(2) ನಡಿ ಸೇವೆಗೆ ಗುಡ್ ಬೈ ಹೇಳಿದ್ದಾರೆ.

Edited By :
PublicNext

PublicNext

02/04/2022 07:33 am

Cinque Terre

49.72 K

Cinque Terre

8

ಸಂಬಂಧಿತ ಸುದ್ದಿ