ಲಕ್ನೋ: ಅನೇಕರು ತಮ್ಮ ನೆಚ್ಚಿನ ನಟನನ್ನು ಅನುಕರಣೆ ಮಾಡುತ್ತಾರೆ. ಹೀಗೆ ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ ಅಭಿಮಾನಿಯೋರ್ವ ಹೀಗೆ ಅನುಕರಣೆ ಮಾಡಲು ಹೋಗಿ ಪೊಲೀಸ್ ಅತಿಥಿಯಾಗಿದ್ದಾನೆ.
ಹೌದು. ಉತ್ತರ ಪ್ರದೇಶದ ರಾಜಧಾನಿ ಲಕ್ನೋ ನಿವಾಸಿ ಅಜಂ ಅನ್ಸಾರಿಗೆ ನಟ ಸಲ್ಮಾನ್ ಖಾನ್ ಅವರ ಮೇಲೆ ಭಾರಿ ಅಭಿಮಾನ. ನೆಚ್ಚಿನ ನಟನ ಸ್ಟೈಲ್‌ನಲ್ಲಿ ಅಜಂ ಅನ್ಸಾರಿ ಶರ್ಟ್ ಧರಿಸದೇ ಠಾಕೂರ್‌ಗಂಜ್ ಪ್ರದೇಶದ ಜನ ನಿಬಿಡ ರಸ್ತೆಯ ಮೇಲೆ ನಡೆದುಕೊಂಡು ಬಂದಿದ್ದಾನೆ. ಇದನ್ನು ನೋಡಲು ಭಾರಿ ಸಂಖ್ಯೆಯಲ್ಲಿ ಜನರು ಸೇರುತ್ತಿದ್ದಂತೆ ಸಂಚಾರ ದಟ್ಟಣೆ ಉಂಟಾಯಿತು. ಈ ದೃಶ್ಯವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಂಚಾರಕ್ಕೆ ತೊಂದರೆ ಉಂಟು ಮಾಡಿದ ಅಜಂ ಅನ್ಸಾರಿಯನ್ನು ಲಕ್ನೋ ಪೊಲೀಸರು ಬಂಧಿಸಿದ್ದಾರೆ.
PublicNext
09/05/2022 05:02 pm