ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಟಿ ಶಿಲ್ಪಾ ಶೆಟ್ಟಿ, ತಾಯಿ, ತಂಗಿಗೆ ಕೋರ್ಟ್ ಸಮನ್ಸ್

ಮುಂಬೈ: ಸಾಲದ ಹಣವನ್ನು ಮರುಪಾವತಿ ಮಾಡದ ಆರೋಪದಲ್ಲಿ ಸಲ್ಲಿಕೆಯಾದ ದೂರಿನ ಅನ್ವಯ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ಅವರ ಸಹೋದರಿ ಶಮಿತಾ ಶೆಟ್ಟಿ ಹಾಗೂ ತಾಯಿ ಸುನಂದಾ ಶೆಟ್ಟಿ ಅವರಿಗೆ ಅಂಧೇರಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.

ಶಿಲ್ಪಾ ಶೆಟ್ಟಿ ಹಾಗೂ ಅವರ ತಾಯಿ, ತಂಗಿಯು ಪಡೆದಿದ್ದ 21 ಲಕ್ಷ ರೂಪಾಯಿ ಸಾಲವನ್ನು ಮರುಪಾವತಿ ಮಾಡಿಲ್ಲ ಎಂದು ಉದ್ಯಮಿ ಪರ್ಹಾದ್ ಅಮ್ರಾ ಜುಹು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಮನ್ಸ್ ಜಾರಿ ಮಾಡಲಾಗಿದೆ. ಫೆಬ್ರವರಿ 28ರಂದು ಮೂವರೂ ವಿಚಾರಣೆಗೆ ಹಾಜರಾಗಬೇಕೆಂದು ನ್ಯಾಯಾಲಯ ಆದೇಶಿಸಿದೆ.

ಮಾಧ್ಯಮವೊಂದರ ವರದಿ ಪ್ರಕಾರ, ಆಟೋಮೊಬೈಲ್ ಸಂಸ್ಥೆಯೊಂದರ ಮಾಲೀಕರು ತಮ್ಮ ಕಾನೂನು ಸಂಸ್ಥೆಯಾದ M/s Y & A Legal ಮೂಲಕ ಶಿಲ್ಪಾ ಸೇರಿ ಮೂವರ ವಿರುದ್ಧ ದೂರು ದಾಖಲಿಸಿದ್ದಾರೆ. ಉದ್ಯಮಿ ನೀಡಿರುವ ದೂರಿನ ಪ್ರಕಾರ, ಶಿಲ್ಪಾ ಅವರ ತಂದೆ ದಿವಂಗತ ಸುರೇಂದ್ರ 21 ಲಕ್ಷ ರೂ ಸಾಲವನ್ನು ಪಡೆದಿದ್ದರು. ಅದನ್ನು 2017ರ ಜನವರಿಯಲ್ಲಿ ಬಡ್ಡಿಯೊಂದಿಗೆ ಪಾವತಿಸಬೇಕಾಗಿತ್ತು. ಆದರೆ, ಸಾಲವನ್ನು ಮರುಪಾವತಿಸಲು ಶಿಲ್ಪಾ, ಶಮಿತಾ ಮತ್ತು ಸುನಂದಾ ವಿಫಲರಾಗಿದ್ದಾರೆ.

ಸುರೇಂದ್ರ ಕಂಪನಿ ಪರವಾಗಿ ಚೆಕ್ ಬರೆದಿದ್ದು, ಸಾಲದ ವಿಚಾರ ಅವರ ಪುತ್ರಿಯರು ಮತ್ತು ಪತ್ನಿಗೆ ತಿಳಿದಿತ್ತು. ಸಾಲ ಮರುಪಾವತಿ ಮಾಡುವ ಮುನ್ನವೇ ಸುರೇಂದ್ರ ತೀರಿಕೊಂಡಿದ್ದರಿಂದ ಅದನ್ನು ತೀರಿಸುವ ಹೊಣೆಗಾರಿಕೆ ಅವರದಾಗಿತ್ತು. ಆದರೆ ಹಣ ಪಡೆದಿದ್ದನ್ನೂ ಅವರು ನಿರಾಕರಿಸಿದ್ದರು ಎಂದು ವರದಿಯಾಗಿದೆ.

Edited By : Vijay Kumar
PublicNext

PublicNext

13/02/2022 01:38 pm

Cinque Terre

40.85 K

Cinque Terre

1