ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಟಿ ಅನನ್ಯಾ ಪಾಂಡೆ ಗೆ NCB ಡ್ರಿಲ್

ನವದೆಹಲಿ: ಡ್ರಗ್ ಪಾರ್ಟಿ ಗೆ ಸಂಬಂಧಿಸಿದಂತೆ ಅಂದರ್ ಆಗಿರುವ ಆರ್ಯನ್ ವಿಚಾರಕ್ಕೆ ಸಂಬಂಧಿಸಿದಂತೆ ನಟಿ ಅನನ್ಯಾ ಪಾಂಡೆ ಅವರನ್ನು ಎನ್ ಸಿಬಿ (NCB) ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಎನ್ ಸಿಬಿ ಸಮನ್ಸ್ ಹಿನ್ನಲೆಯಲ್ಲಿ ಇಂದು ಅನನ್ಯಾ ಪಾಂಡೆ ಮುಂಬೈನಲ್ಲಿರುವ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದಾರೆ. ಇಂದು ಸುದೀರ್ಘ ವಿಚಾರಣೆ ನಡೆಯುತ್ತಿದೆ.

ಮೂಲಗಳ ಪ್ರಕಾರ ಆರ್ಯನ್ ಖಾನ್ ಮತ್ತು ಅನನ್ಯಾ ಪಾಂಡೆ ನಡುವೆ ಮಾದಕ ವಸ್ತುಗಳ ಹಂಚಿಕೆ ಸಂಬಂಧ ವ್ಯಾಟ್ಸಪ್ ನಲ್ಲಿ ಚಾಟ್ ನಡೆದಿದೆ ಎನ್ನಲಾಗಿದೆ. ಈ ಹಿಂದೆ ಎನ್ ಸಿಬಿ ಅಧಿಕಾರಿಗಳು ಇದೇ ವ್ಯಾಟ್ಸಪ್ ಚಾಟ್ ಅನ್ನೇ ಪ್ರಮುಖ ಸಾಕ್ಷಿಯನ್ನಾಗಿಸಿಕೊಂಡು ಕೋರ್ಟ್ ನಲ್ಲಿ ವಾದ ಮಂಡಿಸಿತ್ತು.

ಆರ್ಯನ್ ಖಾನ್ ಜೊತೆಗಿನ ವ್ಯಾಟ್ಸಪ್ ಮಾತುಕತೆಯಲ್ಲಿ ಗಾಂಜಾ ಬಗ್ಗೆ ಪ್ರಸ್ತಾಪಿಸಲಾಗಿದ್ದು ಆರ್ಯನ್ ಖಾನ್ ಬಾಲಿವುಡ್ ನ ಪ್ರಮುಖ ಜನರಿಗೆ ಮಾದಕ ವಸ್ತುಗಳನ್ನು ಮಾರಾಟ ಮಾಡಿದ್ದಾರೆ ಎಂದು ಶಂಕಿಸಲಾಗಿದೆ. ಈ ಹಿಂದೆ ಕೋರ್ಟ್ನಲ್ಲಿವಾದ ಮಂಡಿಸಿದ್ದ ಎನ್ಸಿಬಿ ಪರ ವಕೀಲರು, ಆರ್ಯನ್ ಖಾನ್ ಅಂತರಾಷ್ಟ್ರೀಯ ಡ್ರಗ್ ಪೆಡ್ಲರ್ ಜೊತೆಗೆ ಸಂಪರ್ಕ ಹೊಂದಿದ್ದಾರೆ. ಅವರಿಂದ ಮಾಧಕ ವಸ್ತುಗಳನ್ನು ಖರೀದಿಸಿ ಬಾಲಿವುಡ್ ಮಂದಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು.

Edited By : Nirmala Aralikatti
PublicNext

PublicNext

22/10/2021 05:10 pm

Cinque Terre

40.64 K

Cinque Terre

2