ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಏರ್ ಪೋರ್ಟ್ ನಲ್ಲಿ ಸಲ್ಮಾನ್ ಖಾನ್ ತಡೆದಿದ್ದ ಸಿಐಎಸ್ಎಫ್ ಅಧಿಕಾರಿಗೆ ಈಗ ಸಂಕಷ್ಟ

ಮುಂಬೈ: ಮುಂಬೈ ವಿಮಾನ ನಿಲ್ದಾಣದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ರನ್ನು ತಡೆದು ನಿಲ್ಲಿಸಿ ಭಾರಿ ಮೆಚ್ಚುಗೆಗೆ ಪಾತ್ರರಾಗಿದ್ದ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್ ಎಫ್) ಯುವ ಅಧಿಕಾರಿಗೆ ಈಗ ಸಂಕಷ್ಟ ಎದುರಾಗಿದೆ. ಸಲ್ಮಾನ್ ಖಾನ್ ಅವರ ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಮಾಧ್ಯಮವೊಂದಕ್ಕೆ ಸಿಐಎಸ್ ಎಫ್ ಅಧಿಕಾರಿ ಸೋಮನಾಥ್ ಮೊಹಂತಿ ಅವರು ಪ್ರತಿಕ್ರಿಯೆ ನೀಡಿದ್ದಾರೆ ಎನ್ನಲಾಗಿದೆ. ಅದರಿಂದ ಅವರಿಗೆ ತೊಂದರೆ ಶುರುವಾಗಿದೆ.

ಮೊಹಂತಿ ಏರ್ ಪೋರ್ಟ್ ನಲ್ಲಿ ಕರ್ತವ್ಯದಲ್ಲಿದ್ದ ಸಿಐಎಸ್ ಎಫ್ ಅಧಿಕಾರಿ ಸೋಮನಾಥ್ ಸಲ್ಮಾನ್ ಭದ್ರತಾ ತಪಾಸಣೆ ನಡೆಸಿ ಕಳುಹಿಸಿದ್ದರು. ಸಲ್ಮಾನ್ ಖಾನ್ ರನ್ನು ತಡೆದು ಸಾಮಾನ್ಯ ಜನರ ರೀತಿ ಸಾಲಿನಲ್ಲಿ ನಿಲ್ಲುವಂತೆಯು ಮತ್ತು ದಾಖಲಾತಿಗಳನ್ನು ತೋರಿಸುವಂತೆ ಹೇಳಿದರು.

ಈ ವಿಡಿಯೋ ವೈರಲ್ ಆಗಿ ಇವರು ಹೀರೋ ಆಗಿದ್ದರು ಆದ್ರೆ ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಮಾಧ್ಯಮವೊಂದಕ್ಕೆ ಮೊಹಂತಿ ಅವರು ಪ್ರತಿಕ್ರಿಯೆ ನೀಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಿಐಎಸ್ ಎಫ್ ಪ್ರೋಟೋಕಾಲ್ ಪ್ರಕಾರ ಅವರು ಮಾಧ್ಯಮಗಳ ಜತೆಗೆ ಹಿರಿಯ ಅಧಿಕಾರಿಗಳ ಪೂರ್ವಾನುಮತಿ ಇಲ್ಲದೆಯೇ ಮಾತುಕತೆ ನಡೆಸುವಂತಿರಲಿಲ್ಲ. ಆದ್ದರಿಂದ ಇವರು ನಿಯಮ ಮೀರಿದ್ದರಿಂದ ಅವರ ಮೊಬೈಲ್ ಫೋನ್ ಅನ್ನು ಹಿರಿಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ, ಈಗ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

Edited By : Nirmala Aralikatti
PublicNext

PublicNext

24/08/2021 08:04 pm

Cinque Terre

147.55 K

Cinque Terre

12

ಸಂಬಂಧಿತ ಸುದ್ದಿ