ನವದೆಹಲಿ: ಜುಹೂ ಪ್ರದೇಶದಲ್ಲಿರುವ ತಮ್ಮ ವಸತಿ ಕಟ್ಟಡಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಬಾಲಿವುಡ್ ನಟ ಸೋನು ಸೂದ್ ಅವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.
ಸೋನು ಸೂದ್ ಬೃಹನ್ ಮುಂಬೈ ಮಹಾನಗರ ಪಾಲಿಕೆ (ಬಿಎಂಎಂಸಿ) ಅನುಮತಿ ಇಲ್ಲದೆ ಜುಹೂನಲ್ಲಿ 6 ಮಹಡಿಯ ವಸತಿ ಕಟ್ಟಡವೊಂದನ್ನ ಹೋಟೆಲ್ ಆಗಿ ಪರಿವರ್ತಿಸಿದ್ದಾರೆ ಎಂದು ಪಾಲಿಕೆ ಆರೋಪಿಸಿದೆ. ಈ ಸಂಬಂಧ 2020ರ ಅಕ್ಟೋಬರ್ನಲ್ಲಿ ಸೋನು ಸೂದ್ಗೆ ಬಿಎಂಸಿ ನೋಟಿಸ್ ನೀಡಿತ್ತು. ಇದನ್ನು ರದ್ದುಗೊಳಿಸಬೇಕು ಎಂದು ಕೋರಿ ಅವರು ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಬಾಂಬೆ ಹೈಕೋರ್ಟ್ ಅವರ ಅರ್ಜಿಯನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸೋನು ಸೂದ್ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದಾರೆ.
ವಸತಿ ಪ್ರದೇಶವನ್ನು ವಾಣಿಜ್ಯಾತ್ಮಕ ಉದ್ದೇಶಕಕ್ಕೆ ಪರಿವರ್ತಿಸುವ ಅರ್ಜಿಯನ್ನು ಮಹಾರಾಷ್ಟ್ರ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರದ ಅನುಮತಿಗೆ ಒಳಪಟ್ಟು ನಗರಸಭೆ ಆಯುಕ್ತರು ಅನುಮೋದಿಸಿದ್ದಾರೆ ಎಂದು ಸೂದ್ ಅರ್ಜಿಯಲ್ಲಿ ತಿಳಿಸಿದ್ದಾರೆ.
PublicNext
31/01/2021 07:00 pm