ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ತಾಂಡವ್' ವೆಬ್‌ ಸರಣಿ ವಿವಾದ: ಅಮೆಜಾನ್ ತಂಡಕ್ಕೆ ಸಮನ್ಸ್ ಶಾಕ್!

ನವದೆಹಲಿ: 2021ರ ಬಹುನಿರೀಕ್ಷಿತ ವೆಬ್‌ಸರಣಿ ‘ತಾಂಡವ್’ ವಿವಾದಕ್ಕೆ ಸಂಬಂಧಿಸಿದಂತೆ ಅಮೆಜಾನ್‌ ಪ್ರೈಂನ ತಂಡಕ್ಕೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ ಸಮನ್ಸ್ ಜಾರಿಗೊಳಿಸಿದೆ.

ಬಿಜೆಪಿಯ ಅನೇಕ ನಾಯಕರು 'ತಾಂಡವ್' ವೆಬ್ ಸೀರೀಸ್ ನಿಷೇಧಿಸುವಂತೆ ಆಗ್ರಹಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಸದ್ಯ ಅಮೆಜಾನ್ ಪ್ರೈಂನ ಭಾರತ ಮೂಲದ ಮುಖ್ಯಸ್ಥೆ ಅಪರ್ಣ ಪುರೋಹಿತ್ ವಿರುದ್ಧ ನವದೆಹಲಿಯ ಹಜರತ್‌ಗಂಜ್ ಕೊತ್ವಾಲಿಯಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದು ವರದಿಯಾಗಿದೆ.

ನೂತನ ವೆಬ್ ಸೀರೀಸ್ ಮೂಲಕ ಹಿಂದೂಗಳ ಭಾವನೆಗೆ ಧಕ್ಕೆಯುಂಟು ಮಾಡುವ ಯತ್ನ ನಡೆಸುತ್ತಿದ್ದಾರೆ ಎಂದು ಬಿಜೆಪಿಯ ಅನೇಕ ನಾಯಕರು ಆರೋಪಿಸಿದ್ದಾರೆ. ಇತ್ತ ಬಿಜೆಪಿ ಶಾಸಕ ರಾಮ್ ಕದಮ್ ಕೂಡಾ ಈ ವೆಬ್ ಸೀರೀಸ್ ವಿರುದ್ಧ ಘಾಟ್‌ಕೋಪರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

Edited By : Vijay Kumar
PublicNext

PublicNext

18/01/2021 11:27 am

Cinque Terre

73.58 K

Cinque Terre

2

ಸಂಬಂಧಿತ ಸುದ್ದಿ