ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾಟಕದ ರಾಣಿ ಅನುಶ್ರೀಯಿಂದ ಶುರುವಾಗಲಿದೆ ಹೊಸ ಅವತಾರ: ಸ್ಫೋಟಕ ಹೇಳಿಕೆ ನೀಡಿದ ಪ್ರಶಾಂತ್ ಸಂಬರಗಿ

ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಿಸಿಬಿ ವಿಚಾರಣೆ ಎದುರಿಸಿರುವ ನಿರೂಪಕಿ, ನಟಿ ಅನುಶ್ರೀ ಕಣ್ಣೀರು ಹಾಕಿದ್ದಾರೆ. ಆದರೆ ಇದೀಗ ಪ್ರಶಾಂತ್​ ಸಂಬರಗಿ ಟ್ವಿಟರ್ ಮೂಲಕ ಸ್ಫೋಟಕ ಹೇಳಿಕೆಯನ್ನು ನೀಡಿದ್ದು "ಕೊರೊನಾ ಇದೆ, ಹತ್ತಿರ ಬರಬೇಡಿ.. ಇದು ಇವತ್ತು ಪ್ರದರ್ಶನ ಆಗಲಿರೋ ಹೊಸಾ ಡ್ರಾಮ, ಪೊಲೀಸ್ ಅರೆಸ್ಟ್ ಮಾಡ್ತಾರೆ ಅಂತ ಗೊತ್ತಾದ ತಕ್ಷಣಕ್ಕೆ ಶುರು ಆಗುತ್ತೆ ಕಥೆ, ನಾಟಕದ ರಾಣಿಯ ಹೊಸ ಅವತಾರ ಎಂದಿದ್ದಾರೆ.

ಸಿಸಿಬಿ ವಿಚಾರಣೆ ಕುರಿತು ನಿರೂಪಕಿ ಅನುಶ್ರೀ ವಿಡಿಯೋಒಂದನ್ನು ತನ್ನ ಫೇಸ್​ಬುಕ್ ಪೇಜ್​ನಲ್ಲಿ ಪೋಸ್ಟ್ ಮಾಡಿದ್ದು, 'ಸಿಸಿಬಿ ಕಚೇರಿಗೆ ಹೋದ ಮಾತ್ರಕ್ಕೆ ನಾನು ಅಪರಾಧಿ ಅಥವಾ ಆರೋಪಿ ಅಂತ ಆಗುವುದಿಲ್ಲ. ಆ ವಿಚಾರದಲ್ಲಿ ನನ್ನನ್ನು ಬಿಂಬಿಸಿದ ರೀತಿ ನನಗೆ ತುಂಬಾನೇ ನೋವು ಮಾಡಿತ್ತು. ನೋವು ತುಂಬಾ ಸಣ್ಣ ಪದ, ಕಳೆದ ಒಂದು ವಾರದಿಂದ ನಮ್ಮ ಮನೆಯವರ ನೆಮ್ಮದಿಯನ್ನು ಹಾಳು ಮಾಡಿತ್ತು. ಆದರು ಕೂಡ ಈ ಕಷ್ಟಕಾಲದಲ್ಲಿ ಏನೂ ಹೆಳದೆ, ಏನೂ ಕೇಳದೆ ಅನುಶ್ರೀ ನೀವೇನು ಅಂತ ನಮಗೆ ಚೆನ್ನಾಗಿ ಗೊತ್ತು. ನಿಮ್ಮ ಮೇಲೆ ನಮಗೆ ಅಪಾರವಾದ ನಂಬಿಕೆ ಇದೆ ಅಂತ ನನ್ನ ಜೊತೆ ನಿಂತಿರುವ ಎಲ್ಲಾ ಕನ್ನಡಿಗರಿಗೆ ತುಂಬು ಹೃದಯದ ಧನ್ಯವಾದಗಳು. ಇದನ್ನು ನಾನು ಯಾವತ್ತೂ ಮರೆಯಲ್ಲ" ಎಂದು ಹೇಳುತ್ತಾ ಅನುಶ್ರೀ ಗಳಗಳನೇ ಕಣ್ಣೀರಿಟ್ಟಿದ್ದರು.

ಇದರ ಬೆನ್ನಲ್ಲೇ ಸರಣಿ ಟ್ವೀಟ್​ ಮಾಡಿರುವ ಸಂಬರಗಿ, 'ಇಲ್ಲಿಯವರೆಗೆ ಅನುಶ್ರೀಯನ್ನು ಅರೆಸ್ಟ್ ಆಗದಂತೆ ಶುಗರ್​ ಡ್ಯಾಡಿ ತಡೆದಿದ್ದಾರೆ. ಇನ್ಮುಂದೆ ಅದೆಲ್ಲ ನಡೆಯೋದಿಲ್ಲ. ಆಕೆಯ ತಪ್ಪಿಗೆ ಕೆಲವೇ ದಿನಗಳಲ್ಲಿ ಶಿಕ್ಷೆಯಾಗುವುದು ನಿಶ್ಚಿತ, ಅನುಶ್ರೀಯ ಮತ್ತಷ್ಟು ರಹಸ್ಯಗಳು ಹೊರಬರಲಿವೆ' ಎಂದಿದ್ದಾರೆ. ಇದೀಗ ಈ ಶುಗರ್​ ಡ್ಯಾಡಿ ಎಂಬ ಪ್ರಶ್ನೆ ಉದ್ಭವವಾಗಿದೆ.

'ಅನುಶ್ರೀ 'ರಿಂಗ್​ ಮಾಸ್ಟರ್​' ಸಿನಿಮಾದಲ್ಲಿ ಅಭಿನಯಿಸಿದ್ದರು. ಈ ಬಗ್ಗೆಯೂ ಪ್ರಸ್ತಾಪಿಸಿರುವ ಪ್ರಶಾಂತ್ ಸಂಬರಗಿ, 'ಈ ಸಿನಿಮಾದಲ್ಲಿ ಹೊಸ ವರ್ಷಾಚರಣೆ ಪ್ರಯುಕ್ತ ಅನುಶ್ರೀ ಮತ್ತು ಅವರ ಸ್ನೇಹಿತರು ಡ್ರಗ್ಸ್​ ಪೆಡ್ಲರ್​ಗೆ ಕರೆ ಮಾಡುತ್ತಾರೆ. ಆಗ ಆತನ ನಿಜ ಬಣ್ಣ ಬಯಲಾಗುತ್ತದೆ. ಸಿನಿಮಾದಂತೆ ಅನುಶ್ರೀ ನಿಜ ಜೀವನವೂ ಇದೆ' ಎಂದು ಆರೋಪಿಸಿದ್ದಾರೆ.

Edited By :
PublicNext

PublicNext

03/10/2020 01:23 pm

Cinque Terre

95.15 K

Cinque Terre

0