ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಂಗನಾ ವಿರುದ್ಧ ದಾಖಲಾಯ್ತು ಮಾನನಷ್ಟ ಮೊಕದ್ದಮೆ

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದನ್ನು ಖಂಡಿಸಿ ಸಾಹಿತಿ ಜಾವೇದ್ ಅಖ್ತರ್ ನಟಿ ಕಂಗನಾ ರಾಣವತ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ಕಂಗನಾ ರಣಾವುತ್ ಅವರು ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನ, ನನ್ನ ಪ್ರತಿಷ್ಠೆಗೆ ಹಾನಿ ಮಾಡಿದೆ.

ವೀಡಿಯೊ ಸಂದರ್ಶನವು ವಿವಿಧ ಆನ್ ಲೈನ್ ಪ್ಲಾಟ್ ಫಾರ್ಮ್ ಗಳಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿದೆ ಎಂದು ಹಿರಿಯ ಸಾಹಿತಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಇದೀಗ ಐಪಿಸಿ ಸೆಕ್ಷನ್ 499 ಮತ್ತು 500ರ ಅಡಿಯಲ್ಲಿ ಕಂಗನಾ ರಣಾವುತ್ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸುವಂತೆ ಜಾವೇದ್ ಅಖ್ತರ್ ಕೋರಿದ್ದಾರೆ.

ಈ ಪ್ರಕರಣದ ಮೊದಲ ವಿಚಾರಣೆ ಡಿಸೆಂಬರ್ 3, 2020 ನಡೆಯಲಿದೆ.

Edited By : Nirmala Aralikatti
PublicNext

PublicNext

04/11/2020 10:05 am

Cinque Terre

84.83 K

Cinque Terre

2