ಬೆಳಗಾವಿ: ಕಾರ್‌ನಲ್ಲಿ ಕುಳಿತಾಗ ಯಾಕೆ ಮಾಸ್ಕ್ ಹಾಕಿರಲಿಲ್ಲ ಎಂದು ಪ್ರಶ್ನಿಸಿದ ಪೊಲೀಸರೊಂದಿಗೆ ವೈದ್ಯ ದಂಪತಿ ಅನಗತ್ಯ ವಾದ ಮಾಡಿದ್ದಾರೆ. ಈ ಘಟನೆ ಬೆಳಗಾವಿಯಲ್ಲಿ ರವಿವಾರ ನಡೆದಿದ್ದು ವೈದ್ಯ ದಂಪತಿಗೆ ತಿಳಿ ಹೇಳುವಲ್ಲಿ ಪೊಲೀಸರು ಸುಸ್ತಾಗಿದ್ದಾರೆ.
ನಾವು ನಮ್ಮ ಪಾಡಿಗೆ ಕಾರ್‌ನಲ್ಲಿ ಹೊರಟಿದ್ದೇವೆ. ನಮ್ಮ ಅಕ್ಕಪಕ್ಕ ಯಾರೂ ಇಲ್ಲ. ಆದರೂ ನಾವೇಕೆ ಮಾಸ್ಕ್ ಧರಿಸಬೇಕು. ಕಾರ್ ಬಿಟ್ಟು ಇಳಿದಕೂಡಲೇ ಮಾಸ್ಕ್ ಧರಿಸುತ್ತೇವೆ ಎಂಬುದು ವೈದ್ಯ ದಂಪತಿಯ ವಾದವಾಗಿದೆ. ಅದಕ್ಕೆ ಪೊಲೀಸರು ಸಾರ್ವಜನಿಕ ಪ್ರದೇಶದಲ್ಲಿ ಎಲ್ಲಿದ್ದರೇನು? ನೀವು ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಬುದ್ಧಿ ಹೇಳಿ ಕಳಿಸಿದ್ದಾರೆ.
PublicNext
17/01/2022 09:48 am