ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟ್ಟುನಿಟ್ಟಿನ ನೈಟ್ ಕರ್ಫ್ಯೂ ಶುರು: ಅಲರ್ಟ್ ಆದ ಪೊಲೀಸರು

ಬೆಂಗಳೂರು: ರಾಜ್ಯ ಸರ್ಕಾರ ಇಂದಿನಿಂದ 10 ದಿನಗಳ ಕಾಲ ಓಮಿಕ್ರಾನ್ ವೈರಸ್ ತಡೆ ಹಾಗೂ ಕೊರೋನಾ ನಿಯಂತ್ರಣಕ್ಕಾಗಿ ಜಾರಿಗೊಳಿಸಿರುವ ನೈಟ್ ಕರ್ಪ್ಯೂ ಅವಧಿ ಶುರುವಾಗಿದೆ. ರಾತ್ರಿ 10 ರಿಂದ ಬೆಳಿಗ್ಗೆ 5ರವರೆಗೆ ಜಾರಿಗೊಳಿಸಲಾಗಿರುವ ನೈಟ್ ಕರ್ಪ್ಯೂ ಕಟ್ಟು ನಿಟ್ಟಾಗಿ ಜಾರಿಗೊಳಿಸಲು ಪೊಲೀಸರು ಶ್ರಮಿಸುತ್ತಿದ್ದಾರೆ.

ಈ ಬಗ್ಗೆ ರಾಜ್ಯದ ಅನೇಕ ಕಡೆಗಳಲ್ಲಿ ಈಗಾಗಲೇ ಪೊಲೀಸರು ಸಾರ್ವಜನಿಕರಿಗೆ ಮಾಹಿತಿಯನ್ನು ನೀಡಿದ್ದಾರೆ. ಇತ್ತ ಶಿವಾಜಿ ನಗರದಲ್ಲಿ ಪೊಲೀಸರು ಧ್ವನಿವರ್ಧಕದ ಮೂಲಕ ಸಾರ್ವಜನಿಕರಿಗೆ ಇಂದಿನಿಂದ ಜಾರಿಗೊಳ್ಳುತ್ತಿರುವ ನೈಟ್ ಕರ್ಪ್ಯೂ ಮಾರ್ಗಸೂಚಿ ಕ್ರಮಗಳನ್ನು ಅನುಸರಿಸುವಂತೆ ಸಾರ್ವಜನಿಕರಿಗೆ ತಿಳಿಸುತ್ತಿದ್ದಾರೆ. ಅಲ್ಲದೇ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾಧ್ಯಂತ ಅನೇಕ ಕಡೆಯಲ್ಲಿ ಪೊಲೀಸರು ನಾಕಾ ಬಂಧಿ ಆರಂಭಿಸಿ, ವಾಹನಗಳನ್ನು ತಪಾಸಣೆ ಕೂಡ ನಡೆಸುತ್ತಿದ್ದಾರೆ. ಒಂದು ವೇಳೆ ನೈಟ್ ಕರ್ಪ್ಯೂ ಸಂದರ್ಭದಲ್ಲಿ ಸಾರ್ವಜನಕರು ಅನಗತ್ಯವಾಗಿ ಓಡಾಡಿದರೆ ಕೇಸ್ ಬೀಳೋದು ಗ್ಯಾರಂಟಿ.

Edited By : Nagaraj Tulugeri
PublicNext

PublicNext

28/12/2021 10:16 pm

Cinque Terre

49.36 K

Cinque Terre

3

ಸಂಬಂಧಿತ ಸುದ್ದಿ