ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಟ್ಟು ಮೈಲಿಗೆಯೇ? : ಡಿವೋರ್ಸ್ ಗೆ ಅದುವೇ ಕಾರಣವಾಯ್ತಾ?

ವಡೋದರಾ: ಪ್ರತಿ ಹೆಣ್ಣಿನ ಬದುಕಿನಲ್ಲಿ 'ಋತುಸ್ರಾವ' ಸಾಮಾನ್ಯ ಆದ್ರೆ ಅದು ಶಾಪವಲ್ಲ ಮೈಲಿಗೆಯೂ ಅಲ್ಲ.

ಆದ್ರೆ ಇಲ್ಲೊಬ್ಬ ಪತಿ ಪತ್ನಿಯ ವಿರುದ್ಧ ಡಿವೋರ್ಸ್ ಪಡೆಯಲು ಋತುಸ್ರಾವದ ಕಾರಣ ನೀಡಿದ್ದು ಮಾತ್ರ ಎಲ್ಲರ ಗಮನ ಸೆಳೆದಿದೆ.

ಹೌದು ವೃತ್ತಿಯಲ್ಲಿ ಆಕೆ ಶಿಕ್ಷಕಿ ಆತ ಖಾಸಗಿ ಕಂಪನಿಯಲ್ಲಿ ನೌಕರ. ಈ ವರ್ಷ ಜನವರಿ ತಿಂಗಳಲ್ಲಿ ಅವರ ವಿವಾಹವಾಗಿತ್ತು.

ಆದರೆ ಇವರ ಡಿವೋರ್ಸ್ ಗೆ 'ಋತುಸ್ರಾವ'ವೇ ಕಾರಣವಾಗಿದೆ.

ಹೌದು ಡಿವೋರ್ಸ್ ಗಾಗಿ ವಡೋದರಾ ಫ್ಯಾಮಿಲಿ ಕೋರ್ಟ್ ಮೆಟ್ಟಿಲೇರಿದ್ದಾರೆ.

ಮದುವೆಯ ದಿನ ಪತ್ನಿ ಮುಟ್ಟಾಗಿದ್ದಳು. ಆದರೆ ಈ ವಿಚಾರವನ್ನು ಮುಚ್ಚಿಟ್ಟಿದ್ದಳು.

ಸಂಪ್ರದಾಯ ಪ್ರಕಾರ ಮುಟ್ಟಾಗಿದ್ದಾಗ ಶುಭ ಕಾರ್ಯಗಳನ್ನು ಮಾಡುವಂತಿಲ್ಲ.

ಇದು ಗೊತ್ತಿದ್ದೂ ಆಕೆ ವಿಷಯ ಮುಚ್ಚಿಟ್ಟಿದ್ದಳು.

ವಿವಾಹ ಮುಗಿಸಿ ದೇವಸ್ಥಾನಕ್ಕೆ ತೆರಳುವ ಸಂದರ್ಭದಲ್ಲಿ ಒಳಕ್ಕೆ ಬಾರದೆ ಹೊರಗೆ ನಿಂತ ಸಂದರ್ಭದಲ್ಲಿ ಆಕೆ ಈ ವಿಚಾರ ಬಹಿರಂಗಪಡಿಸಿದ್ದಳು.

ಏನೋ ಅರಿಯದೆ ಮಾಡಿದ ತಪ್ಪು ಎಂದು ಇದನ್ನು ಕ್ಷಮಿಸಿಬಿಡಬಹುದಿತ್ತು.

ಆದರೆ, ಮದುವೆಯ ದಿನ ರಾತ್ರಿ ಆಕೆ ಐಷಾರಾಮಿ ಜೀವನದ ಕನಸುಗಳನ್ನು ಹಂಚಿಕೊಂಡು ಇನ್ನು ಮೇಲೆ ತಿಂಗಳಿಗೆ 5,000 ರೂಪಾಯಿ ನನಗೆ ಕೊಡಬೇಕು.

ಮನೆಯಲ್ಲಿ ನಾವಿರುವ ಕೊಠಡಿಗೆ ಹವಾನಿಯಂತ್ರಕವನ್ನು ಅಳವಡಿಸಬೇಕು.

ಕುಟುಂಬ ನಿರ್ವಹಣೆಗೆ ಸಹೋದರ ಹಣ ಪಾವತಿಸುತ್ತಿದ್ದಾನೆ. ಅದು ಸಾಕು.

ಅದರಲ್ಲಿ ಅವರು ನಿರ್ವಹಿಸಿಕೊಳ್ಳಲಿ ಎಂದಾಗ, ಇದು ಸಾಧ್ಯವಿಲ್ಲ ಎಂದೆ ನಾನು.

ಅದಕ್ಕೆ ಆಕೆ, ನಾನು ಹತ್ತು ಜನರ ಜೊತೆ ರಾತ್ರಿ ಮಲಗ್ಲಾ ಎಂದು ಕೇಳಿ ಬೆಚ್ಚಿ ಬೀಳುವಂತೆ ಮಾಡಿದ್ದಳು.

ಈ ಬೇಡಿಕೆ ಈಡೇರಿಸುವುದು ಕಷ್ಟವಾಗಿತ್ತು. ಕೆಲವು ದಿನಗಳ ನಂತರ ಸರಿ ಹೋಗಬಹುದು ಎಂಬ ಆಶಯದೊಂದಿಗೆ ದಾಂಪತ್ಯ ಮುಂದುವರಿದಿತ್ತು.

ಆದರೆ, ಆಕೆ ತವರಿಗೆ ಹೋಗಿ ಹಲವು ದಿನಗಳ ತನಕ ವಾಪಸ್ ಬಾರದೇ ಇರುವುದು ಮುಂದುವರಿಯಿತು.

ಇತ್ತೀಚೆಗೆ ಹೋದಾಗ ಟೆರೇಸ್ನಿಂದ ಹಾರಿ ಪ್ರಾಣತ್ಯಾಗ ಮಾಡುವುದಾಗಿ ಬೆದರಿಕೆ ಒಡ್ಡಿದ್ದಳು.

ಹೀಗಾಗಿ, ಅನಿವಾರ್ಯವಾಗಿ ದಾಂಪತ್ಯ ಮುರಿದುಕೊಳ್ಳಲು ನಿರ್ಧರಿಸಿದೆ ಎಂದು ದೂರಿನಲ್ಲಿ ತಿಳಿಸಿದ್ದಾನೆ.

Edited By : Nirmala Aralikatti
PublicNext

PublicNext

24/12/2020 07:34 pm

Cinque Terre

40.59 K

Cinque Terre

0

ಸಂಬಂಧಿತ ಸುದ್ದಿ