ಥಾಣೆ: ಪಾಲ್ಘರ್ ನಲ್ಲಿ ನಡೆದ ಇಬ್ಬರು ಸಾಧುಗಳ ಮತ್ತು ಒಬ್ಬ ಕಾರು ಚಾಲಕನ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿದ್ದ 47 ಆರೋಪಿಗಳಿಗೆ ಥಾಣೆ ನ್ಯಾಯಾಲಯ ಜಾಮೀನು ನೀಡಿದೆ.
ಜಿಲ್ಲಾ ನ್ಯಾಯಾಧೀಶ ಪಿ.ಪಿ. ಜಾಧವ್ ಅವರು ಆರೋಪಿಗಳಿಂದ ತಲಾ ₹15 ಸಾವಿರ ಹಣವನ್ನು ಭದ್ರತಾ ಠೇವಣಿಯಾಗಿರಿಸಿಕೊಂಡು ಜಾಮೀನು ಮಂಜೂರು ಮಾಡಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಸುಮಾರು 200 ಜನರನ್ನು ಬಂಧಿಸಲಾಗಿದೆ.
‘ಅರ್ಜಿದಾರರ ಪರ ಹಾಜರಾದ ವಕೀಲರಾದ ಅಮೃತ್ ಅಧಿಕಾರಿ ಮತ್ತು ಅತುಲ್ ಪಾಟೀಲ್ ಅವರು ಈ ಘಟನೆಯಲ್ಲಿ ತಮ್ಮ ಕಕ್ಷಿದಾರರದ್ದು ಯಾವುದೇ ಪಾತ್ರವಿಲ್ಲ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟರು ಮತ್ತು ಪೊಲೀಸರು ಅವರನ್ನು ಕೇವಲ ಅನುಮಾನದಿಂದ ಬಂಧಿಸಿದ್ದಾರೆ ಎಂದು ವಾದಿಸಿದರು.
ಮಹಾರಾಷ್ಟ್ರದ ಪಾಲ್ಘಾರ್ ಜಿಲ್ಲೆಯ ಗಡ್ಚಿಂಚಲೆ ಎಂಬಲ್ಲಿ ಇದೇ ವರ್ಷ ಏಪ್ರಿಲ್ 16ರಂದು ಚಿಕ್ನೆ ಮಹಾರಾಜ್ ಕಲ್ಪವ್ರಕ್ಷಗಿರಿ (70) ಮತ್ತು ಸುಶಿಲ್ಗಿರಿ ಮಹಾರಾಜ್ (35) ಮತ್ತು ಅವರ ಚಾಲಕ ನಿಲೇಶ್ ತೆಲ್ಗಡೆ (30) ಅವರನ್ನು ಹತ್ಯೆ ಮಾಡಲಾಗಿತ್ತು.
PublicNext
07/12/2020 06:25 pm