ಹೊಸದಿಲ್ಲಿ: ಮೈ ಮರಗಟ್ಟುವ ಭೀಕರ ಚಳಿಯ ನಡುವೆಯೂ ದೆಹಲಿಯ ಗಡಿ ಭಾಗದಲ್ಲಿ ರೈತರು ತಮ್ಮ ಹೋರಾಟ ಮುಂದುವರೆಸಿದ್ದಾರೆ. ಕೇಂದ್ರ ಸರ್ಕಾರ ಜಾರಿ ಮಾಡಿರುವ ಮೂರೂ ಕೃಷಿ ಕಾಯಿದೆಗಳ ರದ್ದತಿ ಮತ್ತು ಕನಿಷ್ಠ ಬೆಂಬಲ ಬೆಲೆ ಖಾತ್ರಿ ಬೇಡಿಕೆಗಳಿಂದ ಹಿಂದೆ ಸರಿಯುವ ಮಾತೇ ಇಲ್ಲಎಂದು ಸ್ಪಷ್ಟಪಡಿಸಿವೆ.
ದೆಹಲಿಯ ಸಿಂಘು, ಟಿಕ್ರಿ ಮತ್ತು ಘಾಜಿಪುರ ಗಡಿಗಳಲ್ಲಿ ಪಂಜಾಬ್, ಹರಿಯಾಣ ರಾಜ್ಯಗಳ ಸಾವಿರಾರು ರೈತರು 2020ರ ನವೆಂಬರ್ 26ರಿಂದಲೂ ಪ್ರತಿಭಟನೆ ನಡೆಸುತ್ತಿದ್ದಾರೆ. ಶುಕ್ರವಾರ ದಿಲ್ಲಿಯಲ್ಲಿ 1.1 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಇದು 15 ವರ್ಷಗಳಲ್ಲಿಯೇ ಕನಿಷ್ಠ ತಾಪಮಾನವಾಗಿದೆ.
ಈಗಾಗಲೇ ಬರೋಬ್ಬರಿ 37 ದಿನ ಪೂರೈಸಿರುವ ಪ್ರತಿಭಟನೆಗೆ ಇತರ ರಾಜ್ಯಗಳ ರೈತರು ಕೂಡ ಆಗಮಿಸಿ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಕೇಂದ್ರ ಸರಕಾರದ ಜತೆ ಆರು ಸುತ್ತಿನ ಮಾತುಕತೆ ನಡೆದರೂ ಬಿಕ್ಕಟ್ಟು ಬಗೆಹರಿದಿಲ್ಲ. ಮುಂದಿನ ಮಾತುಕತೆ ಜ.4ರಂದು ನಿಗದಿಯಾಗಿದೆ.
PublicNext
02/01/2021 10:19 am