ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲಂಚ ಪಡೆದ ಆಯುಕ್ತೆ ಸಸ್ಪೆಂಡ್..!

ಬಳ್ಳಾರಿ: ಸರ್ಕಾರದ ಕೆಲಸ ದೇವರ ಕೆಲಸ ಎನ್ನುವ ಗಾದೆ ಕೆಲವರಿಗೆ ಹೊಂದುವುದೇ ಇಲ್ಲ.

ಹಾಗಾಗಿಯೇ ಕೆಲವರು ಸಂಬಳದ ಜೊತೆಗೆ ಗಿಂಬಳಕ್ಕೂ ಆಸೆ ಪಟ್ಟು ತಗಲಾಕಿಕೊಳ್ಳುತ್ತಾರೆ.

ಸದ್ಯ ವ್ಯಕ್ತಿಯೊಬ್ಬರಿಂದ ಲಂಚ ಸ್ವೀಕರಿಸಿದ ಆರೋಪದ ಮೇಲೆ ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತರಾದ ಎಂ.ವಿ. ತುಷಾರಮಣಿ ಅವರನ್ನು ಅಮಾನತುಗೊಳಿಸಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.

ಲಂಚದ ಬೇಡಿಕೆ ಇಟ್ಟು ಲಂಚ ಸ್ವೀಕರಿಸಿ ಆಯುಕ್ತರ ಪದವಿಯ ಘನತೆಗೆ ಧಕ್ಕೆ ತಂದಿದ್ದಾರೆ.

ಈ ಬಗ್ಗೆ ಎರಡು ಆಡಿಯೋ ಕ್ಲಿಪ್, ವಾಟ್ಸಾಪ್ ಸಂದೇಶ ಹಾಗೂ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಇದರಿಂದ ಬಳ್ಳಾರಿ ಮಹಾನಗರ ಪಾಲಿಕೆಯ ದೈನಂದಿನ ಕೆಲಸ ಕಾರ್ಯಗಳಲ್ಲಿ ಮುಜುಗರ ಉಂಟಾಗುತ್ತಿದೆ ಎಂದು ಬಳ್ಳಾರಿ ಜಿಲ್ಲಾಧಿಕಾರಿಗಳು ನಗರಾಭಿವೃದ್ಧಿ ಇಲಾಖೆಗೆ ವರದಿ ನೀಡಿದ್ದರು.

ಇದಕ್ಕೂ ಮೊದಲು ಅ.9ರಂದು ಭ್ರಷ್ಟಾಚಾರ ನಿಗ್ರಹ ದಳ ನಡೆಸಿದ ದಾಳಿಯಲ್ಲಿ ಪಾಲಿಕೆಯ ಆಯುಕ್ತರ ಆಪ್ತ ಸಹಾಯಕರಾದ ಮಲ್ಲಿಕಾರ್ಜುನ ಎಸ್. ಪಾಟೀಲ ಹಾಗೂ ಹೊರಗುತ್ತಿಗೆ ಅಟೆಂಡರ್ ಎಸ್. ಭಾಷ 50 ಸಾವಿರ ರು. ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದರು.

Edited By : Nirmala Aralikatti
PublicNext

PublicNext

17/10/2020 02:37 pm

Cinque Terre

43.21 K

Cinque Terre

8

ಸಂಬಂಧಿತ ಸುದ್ದಿ