ಕಣ್ಣುಗಳ ಆಯಾಸಕ್ಕೆ ಸಾಕಷ್ಟು ಕಾರಣಗಳಿವೆ. ಆಧುನಿಕ ಕಾಲಮಾನಲ್ಲಿ ಎಲ್ಲರ ಕೈಯಲ್ಲೂ ಗಂಟೆಗಟ್ಟಲೆ ಕಂಪ್ಯೂಟರ್ ಹಾಗೂ ಮೊಬೈಲ್. ಇದರಿಂದ ಕಣ್ಣುಗಳಿಗೆ ಸಿಕ್ಕಾಪಟ್ಟೆ ಆಯಾಸವಾಗುತ್ತದೆ.
ಈ ಆಯಾಸ ಕಳೆಯಲು ಹೀಗೆ ಮಾಡಿ
ಟೀ ಬ್ಯಾಗ್: ಕಣ್ಣಿನ ಆಯಾಸವನ್ನು ಹೋಗಲಾಡಿಸಲು ಟೀ ಬ್ಯಾಗ್ಗಳನ್ನು ಉಪಯೋಗಿಸಿ. ಟೀ ಬ್ಯಾಗ್ ಗಳನ್ನು ಸ್ವಲ್ಪ ಸಮಯದವರೆಗೆ ಫ್ರಿಜ್ ನಲ್ಲಿ ಇರಿಸಿ. ನಂತರ ಅದನ್ನು ನೀರಿನಲ್ಲಿ ಅದ್ದಿ, ಕಣ್ಣುಗಳ ಮೇಲೆ ಇಟ್ಟುಕೊಳ್ಳಿ. ಟೀ ಬ್ಯಾಗ್ ಅನ್ನು ಕಣ್ಣುಗಳ ಮೇಲೆ ಇರಿಸುವ ಮೊದಲು, ನಿಧಾನವಾಗಿ ಒತ್ತಿ ಅದರಲ್ಲಿರುವ ಹೆಚ್ಚುವರಿ ನೀರನ್ನು ತೆಗೆದುಬಿಡಿ. ಈ ಟೀ ಬ್ಯಾಗ್ ಮಾಸ್ಕ್ ಬಳಸುವುದರಿಂದ ನಿಮ್ಮ ಕಣ್ಣುಗಳು ಸುಸ್ತು ಕಡಿಮೆಯಾಗುತ್ತದೆ. ಡಾರ್ಕ್ ಸರ್ಕಲ್ ಸಹ ದೂರವಾಗುತ್ತದೆ.
ಆಲೂಗಡ್ಡೆ ಮತ್ತು ಪುದೀನ ಮಾಸ್ಕ್ : ಆಲೂಗಡ್ಡೆ ಮತ್ತು ಪುದೀನಾ ಕಣ್ಣುಗಳ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆಲೂಗಡ್ಡೆಯ ಸಿಪ್ಪೆ ತೆಗೆಯಿರಿ. ನಂತರ ಆಲೂಗಡ್ಡೆ ಮತ್ತು ಕೆಲವು ಪುದೀನ ಎಲೆಗಳನ್ನು ತೆಗೆದುಕೊಂಡು ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟ್ ನಿಂದ ರಸವನ್ನು ತೆಗೆಯಿರಿ. ಆ ರಸದಲ್ಲಿ ಹತ್ತಿಯನ್ನು ಅದ್ದಿ ಅದನ್ನು ನಿಮ್ಮ ಕಣ್ಣುಗಳ ಮೇಲೆ ಇಟ್ಟುಕೊಳ್ಳಿ. ಹೀಗೆ ಮಾಡುವುದರಿಂದ ಕಣ್ಣಿನ ದಣಿವು ಸುಲಭವಾಗಿ ನಿವಾರಣೆಯಾಗುತ್ತದೆ.
ರೋಸ್ ವಾಟರ್: ರೋಸ್ ವಾಟರ್, ಕಣ್ಣುಗಳ ಶುಷ್ಕತೆ ಮತ್ತು ಆಯಾಸವನ್ನು ಕಡಿಮೆ ಮಾಡುತ್ತದೆ. ಹತ್ತಿಯನ್ನು ರೋಸ್ ವಾಟರ್ನಲ್ಲಿ ಅದ್ದಿ, ಅದನ್ನು ಸ್ವಲ್ಪ ಸಮಯದವರೆಗೆ ಕಣ್ಣುಗಳ ಮೇಲೆ ಇಡಬೇಕು. ಇದರಿಂದ ಕಣ್ಣುಗಳ ಕಿರಿಕಿರಿ ಕಡಿಮೆಯಾಗುತ್ತದೆ ಜೊತೆಗೆ ಡಾರ್ಕ್ ಸರ್ಕಲ್ ಸಹ ನಿವಾರಣೆಯಾಗುತ್ತದೆ.
PublicNext
05/08/2022 01:29 pm