ನಿಂಬೆ ಹಣ್ಣಿನ ರಸಂ ಬೇಗ ಆಗುವುದರ ಜತೆಗೆ ರುಚಿಕರವಾಗಿಯೂ ಇರತ್ತೆ.
ಗ್ಯಾಸ್ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ 3 ಕಪ್ ನೀರು ಹಾಕಿ ಚೆನ್ನಾಗಿ ಕುದಿಯಲು ಬಿಡಿ. ನಂತರ ಇದಕ್ಕೆ 2 ಹಸಿಮೆಣಸು ಸೀಳಿಕೊಂಡು ಹಾಕಿ. ¼ ಟೀ ಸ್ಪೂನ್ ಅರಿಶಿನ, 1 ಟೀ ಸ್ಪೂನ್ ಬೆಲ್ಲ, ½ ಟೀ ಸ್ಪೂನ್ ರಸಂ ಪುಡಿ ಹಾಕಿ ಕುದಿಸಿ. ನಂತರ ಉಪ್ಪು ಹಾಕಿ. ಆಮೇಲೆ 4 ಟೇಬಲ್ ಸ್ಪೂನ್ ಲಿಂಬೆಹಣ್ಣಿನ ರಸ ಸೇರಿಸಿ ಕುದಿಸಿ ಗ್ಯಾಸ್ ಆಫ್ ಮಾಡಿ.
ನಂತರ ಒಂದು ಒಗ್ಗರಣೆ ಪಾತ್ರೆಗೆ 1 ಟೀ ಸ್ಪೂನ್ ತುಪ್ಪ ಹಾಕಿ ಅದು ಬಿಸಿಯಾಗುತ್ತಲೇ ಸ್ವಲ್ಪ ಜೀರಿಗೆ 5 ಎಸಳು ಕರಿಬೇವು, ಚಿಟಿಕೆ ಇಂಗು ಹಾಕಿ. ನಂತರ ಈ ಒಗ್ಗರಣೆಯನ್ನು ಮಾಡಿಟ್ಟುಕೊಂಡ ರಸಂಗೆ ಹಾಕಿ ಮುಚ್ಚಿಟ್ಟರೇ ರಸಂ ರೆಡಿ.
PublicNext
10/12/2021 11:55 am