ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿಢೀರ್ ಮಶ್ರೂಮ್ ಮಸಾಲಾ ಮಾಡುವ ವಿಧಾನ

ಮನೆಯಲ್ಲಿ ತರಕಾರಿ ಇಲ್ಲದ ಸಮಯದಲ್ಲಿ ಚಪಾತಿ ಜೊತೆಗೆ ಏನು ಮಾಡುವುದು ಎಂದು ತಿಳಿಯದಿದ್ದಾಗ, ಮನೆಯಲ್ಲಿ ಮಶ್ರೂಮ್ ಇದ್ದರೆ ನಿಟ್ಟುಸಿರು ಬಿಡಬಹುದು. ಏನು ಇದರ ಅರ್ಥ ಅಂತೀರಾ! ನಾವು ಇಂದು ದಿಢೀರಾಗಿ ಮಶ್ರೂಮ್ ಬಳಸಿ ಮಸಾಲಾ ಮಾಡುವುದನ್ನು ಕಲಿಯೋಣ. ಇದನ್ನು ಕುಕ್ಕರಿನಲ್ಲಿ ಬಹು ಬೇಗ ಮಾಡಿಕೊಳ್ಳಬಹುದು. ಮನೆಗೆ ಅನಿರೀಕ್ಷಿತವಾಗಿ ಅಥಿತಿಗಳು ಬಂದಾಗ ಇದನ್ನು ಥಟ್ ಎಂದು ಮಾಡಿಕೊಳ್ಳಬಹುದು. ಕಡಿಮೆ ಸಾಮಾಗ್ರಿಗಳಿಂದ ಬೇಗ ತಯಾರಾಗುವ ಮಸಾಲಾ ಇದು. ಹದವಾಗಿ ಬೆಂದಿರುವ ಮಶ್ರೂಮ್ ಮಸಾಲೆಗಳನೆಲ್ಲಾ ಹೀರಿಕೊಂಡು ತುಂಬಾ ರುಚಿಯಾಗಿರುತ್ತದೆ.

ಈ ಮಸಾಲೆಗೆ ನಾವು ಮುಖ್ಯವಾಗಿ ನೆನೆಸಿದ ಗಸ ಗಸೆ, ನೆನೆಸಿದ ಗೋಡಂಬಿ ಹಾಗೂ ತೆಂಗಿನ ತುರಿ ಬಳಸುತ್ತೇವೆ. ಇದರಿಂದಲೇ ಈ ಮಸಾಲೆಗೆ ವಿಭಿನ್ನವಾದ ರುಚಿ ಬರುತ್ತದೆ. ಇದರಲ್ಲಿ ಹಸಿ ಮೆಣಸಿನಕಾಯಿ ಮತ್ತು ಅಚ್ಛ ಖಾರದಪುಡಿ ಎರಡೂ ಹಾಕುವುದರಿಂದ ಖಾರವಾಗಿರುತ್ತದೆ. ಮನೆಯಲ್ಲಿ ಮಾಡಿ ನೋಡಿ ಎಲ್ಲರಿಗೂ ಇಷ್ಟವಾಗುತ್ತದೆ. ಇದಕ್ಕೆ ಕೊನೆಯಲ್ಲಿ ಕೊಡುವ ತುಪ್ಪದ ಒಗ್ಗರಣೆ ರುಚಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಇನ್ನೇಕೆ ತಡ! ಬನ್ನಿ ಬೇಗ ಮಶ್ರೂಮ್ ಮಸಾಲಾ ಮಾಡಿ ಸವಿಯೋಣ.

Edited By : Vijay Kumar
PublicNext

PublicNext

08/12/2021 09:25 pm

Cinque Terre

46.22 K

Cinque Terre

0