ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಳಿ ಕೂದಲಿನ ಸಮಸ್ಯೆಗೆ ಇಲ್ಲಿದೆ ಪರಿಹಾರ

ನೆಲ್ಲಿಕಾಯಿ : ಅರೆಕಾಲಿಕ ಬಿಳಿ ಕೂದಲು ಸಮಸ್ಯೆಗೆ ನೆಲ್ಲಿಕಾಯಿ ಉತ್ತಮ ಔಷಧಿ. ತೆಂಗಿನ ಎಣ್ಣೆಗೆ ಮೂರು ನಾಲ್ಕು ನೆಲ್ಲಿಕಾಯಿ ತುಂಡನ್ನು ಹಾಕಿ ಚೆನ್ನಾಗಿ ಕುದಿಸಿ. ತಣ್ಣಗಾದ ನಂತರ ಎಣ್ಣೆಯನ್ನು ಕೂದಲಿಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. ಹಚ್ಚಿದ ಒಂದು ಗಂಟೆಯವರೆಗೆ ಕೂದಲನ್ನು ತೊಳೆಯಬೇಡಿ. ರಾತ್ರಿ ಪೂರ್ತಿ ಹಾಗೆ ಇದ್ದರೆ ಒಳ್ಳೆಯದು. ವಾರದಲ್ಲಿ ಒಂದು ಅಥವಾ ಎರಡು ಬಾರಿ ಹೀಗೆ ಮಾಡುತ್ತ ಬಂದರೆ ಬಿಳಿ ಕೂದಲು ಕಪ್ಪಗಾಗುತ್ತದೆ.

ತೆಂಗಿನೆಣ್ಣೆ-ನಿಂಬೆ ರಸ : ತೆಂಗಿನ ಎಣ್ಣೆ ಹಾಗೂ ನಿಂಬೆ ರಸ ಕೂಡ ಕೂದಲಿಗೆ ಒಳ್ಳೆಯದು. ತೆಂಗಿನ ಎಣ್ಣೆಗೆ ನಿಂಬೆ ರಸ ಬೆರೆಸಿ ಕೂದಲು ಹಾಗೂ ತಲೆಗೆ ಹಚ್ಚಿಕೊಳ್ಳಿ. ಮಸಾಜ್ ಮಾಡಿ ಒಂದು ಗಂಟೆ ನಂತರ ತಲೆ ಸ್ನಾನ ಮಾಡಿ. ತೆಂಗಿನ ಎಣ್ಣೆ ಕಪ್ಪು ಕೂದಲ ಬೆಳವಣಿಗೆಗೆ ಸಹಕಾರಿ.

ಈರುಳ್ಳಿ ರಸ: ಈರುಳ್ಳಿ ರಸ ಅರೆಕಾಲಿಕ ಕೂದಲು ಹಣ್ಣಾಗುವುದನ್ನು ತಪ್ಪಿಸುತ್ತದೆ. ತಲೆ ಬೋಳಾಗುವುದರಿಂದಲೂ ಮುಕ್ತಿ ನೀಡುತ್ತದೆ. ಒಂದು ಗಾಜಿನ ಪಾತ್ರೆಯಲ್ಲಿ ಈರುಳ್ಳಿ ರಸ ಹಾಗೂ ನಿಂಬೆ ರಸವನ್ನು ಬೆರೆಸಿ. ಅದನ್ನು ತಲೆ ಹಾಗೂ ಕೂದಲಿಗೆ ಚೆನ್ನಾಗಿ ಹಚ್ಚಿ. ಅರ್ಧ ಗಂಟೆ ನಂತರ ತೊಳೆಯಿರಿ.

ಬಾದಾಮಿ ಎಣ್ಣೆ : ಬಾದಾಮಿ ಎಣ್ಣೆ, ನಿಂಬೆ ರಸ, ನೆಲ್ಲಿ ಕಾಯಿ ರಸವನ್ನು ಸಮ ಪ್ರಮಾಣದಲ್ಲಿ ಮಿಕ್ಸ್ ಮಾಡಿ. ನಂತರ ಅದನ್ನು ತಲೆಗೆ ಹಚ್ಚಿಕೊಳ್ಳಿ. ಕ್ರಮೇಣ ಕೂದಲು ಕಪ್ಪಗಾಗುತ್ತದೆ.

ಗೋರಂಟಿ ಎಲೆ : ಕೂದಲನ್ನು ಕಪ್ಪಾಗಿಸಲು ಗೋರಂಟಿ ಎಲೆಗಳನ್ನು ಬಳಸಬಹುದು. ಗೋರಂಟಿ ಎಲೆಗಳನ್ನು ರುಬ್ಬಿ, ಅದಕ್ಕೆ ಮೂರು ಚಮಚ ನೆಲ್ಲಿಕಾಯಿ ಪುಡಿ, ಒಂದು ಚಮಚ ಕಾಫಿ ಪುಡಿ, ಒಂದು ಚಮಚ ಮೊಸರು ಹಾಕಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ತಲೆಗೆ ಹಚ್ಚಿಕೊಳ್ಳಿ.

ಕರಿಬೇವಿನ ಎಲೆ : ತೆಂಗಿನ ಎಣ್ಣೆಗೆ ಕರಿಬೇವಿನ ಎಲೆ ಹಾಕಿ ಚೆನ್ನಾಗಿ ಕುದಿಸಿ. ನಂತರ ತಣ್ಣಗಾದ ಮೇಲೆ ಅದನ್ನು ಕೂದಲಿಗೆ ಮಸಾಜ್ ಮಾಡಿ. 30-45 ನಿಮಿಷ ಬಿಟ್ಟು ತೊಳೆಯಿರಿ.

ಕಪ್ಪು ಎಳ್ಳು : ಎಳ್ಳೆಣ್ಣೆ ಕೂಡ ಅರೆಕಾಲಿಕ ಬಿಳಿ ಕೂದಲು ತಪ್ಪಿಸಲು ಸಹಕಾರಿ. ಪ್ರತಿದಿನ ಕರಿ ಎಳ್ಳಿನ ಎಣ್ಣೆಯನ್ನು ಕೂದಲಿಗೆ ಹಚ್ಚುತ್ತ ಬಂದರೆ ಮೂರು ತಿಂಗಳಲ್ಲಿ ಪರಿಣಾಮ ನೋಡಬಹುದಾಗಿದೆ.

Edited By : Nirmala Aralikatti
PublicNext

PublicNext

21/11/2021 03:51 pm

Cinque Terre

17.13 K

Cinque Terre

0