ಬಿರಿಯಾನಿಯಲ್ಲಿ ಅಡಕವಾಗಿರುವ ಒಂದು ಮುಖ್ಯವಾದ ಅಂಶವೆಂದರೆ ಅದರ ತಯಾರಿಯಲ್ಲಿ ಬಳಕೆಯಾಗುವ ಮಸಾಲೆ ಪದಾರ್ಥಗಳು. ಪಲಾವಿಗೆ ಹೋಲಿಸಿದರೆ ಸ್ವಲ್ಪ ಭಿನ್ನವಾಗಿರುವ ಹಾಗೂ ಪ್ರಮಾಣದಲ್ಲಿ ಕೂಡ ಸ್ವಲ್ಪ ಜಾಸ್ತಿಯೇ ಇರುವ ಮಸಾಲೆ ಪದಾರ್ಥಗಳು ಬಿರಿಯಾನಿಗೆ ಬೇಕಾಗುತ್ತವೆ. ಪ್ರತಿ ಬಾರಿ ಅಂಗಡಿಯಿಂದ ತರುವ ಬದಲು ಈ ಮಸಾಲೆ ಪದಾರ್ಥಗಳ ಪುಡಿಯನ್ನು ಮೊದಲೇ ತಯಾರಿಸಿ ಶೇಖರಿಸಿಟ್ಟುಕೊಳ್ಳಬಹುದು. ಬಿರಿಯಾನಿಯ ಗುಣಮಟ್ಟತೆಯೂ ಉತ್ತಮವಾಗಿರುತ್ತದೆ. ಈ ಪುಡಿ ತಯಾರಿಸಲು ಯಾವ ಯಾವ ಸಾಂಬಾರ್ ದಿನಸಿಗಳು ಬೇಕಾಗುತ್ತವೆ ಅಂತ ನೋಡೋಣ ಬನ್ನಿ.
PublicNext
14/11/2021 08:52 pm