ಪನೀರ್ ಟಿಕ್ಕಾ ಸಮೋಸ ಇದೊಂದು ಸಂಜೆ ಚಹಾ ಸಮಯಕ್ಕೆ ಸರಿಯಾಗಿ ಹೊಂದುವ ತಿಂಡಿ. ಮೈದಾ ಉಪಯೋಗಿಸಿ ಸಮೋಸಾ ಹಿಟ್ಟನ್ನು ಹಾಗೂ ಪನೀರ್, ಬಟಾಣಿ ಇನ್ನಿತರ ಮಸಾಲೆ ಪುಡಿಗಳನ್ನು ಹಾಕಿ ಟಿಕ್ಕಾ ಮಸಾಲೆಯನ್ನು ತಯಾರಿಸುವ ಹಾಗೂ ಸಮೋಸಾವನ್ನು ಎಣ್ಣೆಯಲ್ಲಿ ಕರಿದ ಮೇಲೆ ಹೊರಭಾಗ ಗರಿಗರಿಯಾಗಿ ಒಳಗಿನ ಟಿಕ್ಕಾ ಮಸಾಲೆ ಚೆನ್ನಾಗಿ ಬೆಂದು ಮೃದುವಾಗಿರುತ್ತದೆ. ಬಿಸಿಬಿಸಿಯಾಗಿರುವಾಗಲೇ ತಿಂದರೆ ಇದರ ರುಚಿ ಅದ್ಭುತ ! ಒಮ್ಮೆ ನಿಮ್ಮ ಮನೆಯವರಿಗಾಗಿ ತಯಾರಿಸಿ, ಮಕ್ಕಳಿಂದ ಹಿಡಿದು ವೃದ್ಧರವರೆಗೆ ಮನೆಯಲ್ಲಿ ಎಲ್ಲರಿಗೂ ಈ ಸಮೋಸಾ ಇಷ್ಟವಾಗುವುದರಲ್ಲಿ ಸಂಶಯವಿಲ್ಲ. ಬನ್ನಿ ಹಾಗಿದ್ದರೆ ಮಾಡುವ ವಿಧಾನವನ್ನು ವಿವರವಾಗಿ ತಿಳಿಯೋಣ.
PublicNext
09/10/2021 09:27 pm