ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಣ್ಣಿಗೆ ಕಾಂಟ್ಯಾಕ್ಟ್ ಲೆನ್ಸ್ ಧರಿಸುವ ಮುನ್ನ ಇರಲಿ ಎಚ್ಚರ

ಕಣ್ಣುಗಳು ಅತ್ಯಂತ ಸೂಕ್ಷ್ಮವಾಗಿದ್ದು, ದಿನವಿಡೀ ಲ್ಯಾಪ್ ಟಾಪ್ಗಳು, ಟಿವಿ ಮತ್ತು ಫೋನ್ ಗಳಿಗೆ ಅಂಟಿಕೊಂಡಿದೆ. ಇದರಿಂದ ಕಣ್ಣಿಗೆ ಹೊರೆ ಹೆಚ್ಚಾಗುವುದಂತೂ ಖಂಡಿತ. ಆದರೂ ನಮ್ಮ ಕಣ್ಣು ಯಾವಾಗಲೂ ಸುಂದರವಾಗಿ ಮತ್ತು ಆಕರ್ಷಕವಾಗಿ ಕಾಣಬೇಕು ಎಂದು ಆಸೆ ಪಡುತ್ತೇವೆ. ಇದಕ್ಕೆ ನಾವು ಆರಿಸಿಕೊಳ್ಳುವ ಮಾರ್ಗ ಕಾಂಟ್ಯಾಕ್ಟ್ ಲೆನ್ಸ್.

ನಮಗೆ ದೃಷ್ಟಿಯಲ್ಲಿ ಸಹಾಯ ಮಾಡುವುದಲ್ಲದೇ, ಇಂದು ಲಭ್ಯವಿರುವ ಕಲರ್ ಕಲರ್ ಲೆನ್ಸ್ ಗಳು ನಮ್ಮನ್ನ ಟ್ರೆಂಡಿಯಾಗಿ ಕಾಣುವಾಗಿ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ, ಅವುಗಳನ್ನು ಸರಿಯಾಗಿ ಬಳಸುವುದು ಮುಖ್ಯ.

ಕಾಂಟ್ಯಾಕ್ಟ್ ಲೆನ್ಸ್ ಬಳಸುವ ಮೊದಲು ನಿಮ್ಮ ಕೈಗಳನ್ನು ತೊಳೆಯಿರಿ: ಅನೇಕ ಸಲ ಅವಸರದಲ್ಲಿದ್ದಾಗ, ಕೈಗಳನ್ನು ತೊಳೆಯದೇ, ಕಾಂಟ್ಯಾಕ್ಟ್ ಲೆನ್ಸ್ ಹಾಕಿಕೊಳ್ಳುತ್ತಾರೆ ಅಥವಾ ತೆಗೆಯುತ್ತಾರೆ. ಹೀಗೆ ಮಾಡಬೇಡಿ, ನಿಮ್ಮ ಕೈಯಲ್ಲಿ ರೋಗಾಣುಗಳು ಮತ್ತು ಹಾನಿಕಾರಕ ಬ್ಯಾಕ್ಟೀರಿಯಾಗಳು ಲೆನ್ಸ್ ಗೆ ಅಂಟಿಕೊಂಡು, ಕಣ್ಣಿನ ಸೋಂಕುಗಳಿಗೆ ಕಾರಣವಾಗಬಹುದು.

ಕಾಂಟ್ಯಾಕ್ಟ್ ಲೆನ್ಸ್ ಹಾಕಿಕೊಂಡು ಮಲಗಬೇಡಿ: ನಿಮ್ಮ ಕಾಂಟ್ಯಾಕ್ಟ್ ಲೆನ್ಸ್ ಗಳನ್ನು ತೆಗೆಯದೇ ಮಲಗಬೇಡಿ. ಹೀಗೆ ಲೆನ್ಸ್ ಇಟ್ಟುಕೊಂಡು ಮಲಗಿದಾಗ, ನಿಮ್ಮ ಕಣ್ಣುಗಳಿಗೆ ಅಗತ್ಯವಾದ ಆಮ್ಲಜನಕ ಸಿಗುವುದಿಲ್ಲ, ಇದು ಕೂಡ ಕಣ್ಣಿನ ಸೋಂಕಿಗೆ ಕಾರಣವಾಗಬಹುದು.

ಮಾರುಕಟ್ಟೆಯಲ್ಲಿರುವ ಎಲ್ಲಾ ಕಾಂಟ್ಯಾಕ್ಟ್ ಲೆನ್ಸ್ ಗಳಲ್ಲಿ ವ್ಯಾಲಿಡಿಟಿ ಡೇಟ್ ಇರುತ್ತದೆ. ಆದ್ದರಿಂದ ಅದರಲ್ಲಿರುವ ಸಮಯದವರೆಗೆ ಮಾತ್ರ ಅವುಗಳನ್ನು ಬಳಸಿ. ಪ್ರತಿ ಬಾರಿ ಕಾಂಡ್ಯಾಕ್ಟ್ ಲೆನ್ಸ್ ಬಳಸುವಾಗ, ಅದರ ಪೆಟ್ಟಿಗೆಯನ್ನು ಸ್ವಚ್ಛಗೊಳಿಸಿ. ಪ್ರತಿ 3 ತಿಂಗಳಿಗೊಮ್ಮೆ ಲೆನ್ಸ್ ಕೇಸ್ ಅನ್ನು ಬದಲಾಯಿಸುತ್ತಿರಿ.

ಜೋರು ಗಾಳಿಯಿದ್ದಾಗ ಅಥವಾ ಭಾರೀ ಮಳೆಯಿದ್ದಾಗ, ಈಜುವಾಗ, ಬೈಕ್ ಚಾಲನೆ ಮಾಡುವಾಗ ಲೆನ್ಸ್ ಹಾಕಿಕೊಳ್ಳಬೇಡಿ. ಅಂತಹ ಸಂದರ್ಭಗಳಲ್ಲಿ, ಧೂಳು ಮತ್ತು ಕೊಳಕು ನಿಮ್ಮ ಕಣ್ಣಿಗೆ ಹೋಗುವ ಅಪಾಯವಿದೆ. ಇದು ನಿಮ್ಮ ಲೆನ್ಸ್ ಗಳನ್ನು ಹಾಳು ಮಾಡಬಹುದು. ಅಲ್ಲದೆ, ಇದು ಕಣ್ಣಿನ ಸೋಂಕಿಗೆ ಕಾರಣವಾಗಬಹುದು. ನಿಮ್ಮ ಕಣ್ಣುಗಳಲ್ಲಿ ಯಾವುದೇ ಉರಿಯ ಭಾವನೆ ಇದ್ದಲ್ಲಿ, ತಕ್ಷಣ ನಿಮ್ಮ ವೈದ್ಯರ ಬಳಿ ಹೋಗಿ.

Edited By : Nirmala Aralikatti
PublicNext

PublicNext

08/09/2021 11:36 am

Cinque Terre

16.56 K

Cinque Terre

0