ತುಪ್ಪ ಮಾನವನ ಆರೋಗ್ಯಕ್ಕೆ ಅತ್ಯಂತ ಮುಖ್ಯ, ಅದರಲ್ಲೂ ಮೂಳೆಗಳು ಗಟ್ಟಿಯಾಗಿರಲು, ದೀರ್ಘಕಾಲ ಆರೋಗ್ಯದಿಂದಿರಲು ತುಪ್ಪ ಸೇವಿಸುವುದು ಅತ್ಯಂತ ಮುಖ್ಯ. ಹಿಂದಿನ ಕಾಲದಿಂದಲೂ ನಮ್ಮ ಆಹಾರ ಪದ್ಧತಿಯಲ್ಲಿ ತುಪ್ಪಕ್ಕೆ ಪ್ರಮುಖ ಸ್ಥಾನ ನೀಡಲಾಗಿದೆ. ಯಾವುದೇ ಖಾದ್ಯವಿರಲಿ, ಮೇಲೆ ಸ್ವಲ್ಪ ತುಪ್ಪ ಸೇರಿಸಿ ತಿನ್ನುವುದು ಅದರ ಸ್ವಾದವನ್ನು ಹೆಚ್ಚಿಸುವುದಷ್ಟೇ ಅಲ್ಲದೇ, ಉತ್ತಮ ಆರೋಗ್ಯವನ್ನೂ ನೀಡುತ್ತದೆ. ನಮ್ಮ ದಕ್ಷಿಣ ಭಾರತದ ಅನೇಕ ಹಬ್ಬದ ಅಡಿಗೆಗಳಲ್ಲಿ ತುಪ್ಪ ಅಗತ್ಯ ಪದಾರ್ಥ. ತುಪ್ಪವಿಲ್ಲದೇ ಸಿಹಿ ತಿನಿಸು ಅಷ್ಟೇನೂ ರುಚಿ ಎನಿಸುವುದಿಲ್ಲ. ಮಕ್ಕಳಿಗೆ ಮನೆಯಲ್ಲಿ ತಿನ್ನಲು ಏನೂ ಅಡಿಗೆ ಮಾಡಿರದಿದ್ದರೆ, ಬಿಸಿ ಅನ್ನದ ಜೊತೆ ಸ್ವಲ್ಪ ತುಪ್ಪ, ಉಪ್ಪು ಸೇರಿಸಿ ತಿನ್ನಲು ನೀಡುವುದೂ ಉಂಟು. ನಾವು ನಿಮಗಾಗಿ ಘೀ ರೈಸ್ ಮಾಡುವ ವಿಧಾನ ತಿಳಿಸುತ್ತಿದ್ದೇವೆ.
PublicNext
02/09/2021 04:36 pm