ಬೇಕಾಗುವ ಸಾಮಾಗ್ರಿಗಳು: 1- ಈರುಳ್ಳಿ ಕತ್ತರಿಸಿದ್ದು, 1-ಹಸಿಮೆಣಸು, 400 ಗ್ರಾಂ-ಅಣಬೆ ಚಿಕ್ಕದ್ದಾಗಿ ಕತ್ತರಿಸಿಕೊಂಡಿದ್ದು, ½ ಟೀ ಸ್ಪೂನ್-ಉಪ್ಪು, 2 ಎಸಳು-ಬೆಳ್ಳುಳ್ಳಿ, 1 ಟೀ ಸ್ಪೂನ್-ಕೊತ್ತಂಬರಿ ಪುಡಿ, 1 ಟೀ ಸ್ಪೂನ್-ಜೀರಿಗೆ ಪುಡಿ, ½ ಟೀ ಸ್ಪೂನ್-ಅರಿಶಿನ, ½ ಟೀ ಸ್ಪೂನ್-ಗರಂ ಮಸಾಲಾ, 1 ಟೇಬಲ್ ಸ್ಪೂನ್-ಟೊಮೆಟೊ ಮಿಶ್ರಣ, ¼ ಕಪ್-ನೀರು.
ಮಾಡುವ ವಿಧಾನ: ಒಂದು ಪ್ಯಾನ್ ಗೆ ಎಣ್ಣೆ ಹಾಕಿ ಅದು ಬಿಸಿಯಾಗುತ್ತಲೆ ಅದಕ್ಕೆ ಹಸಿಮೆಣಸು ಹಾಕಿ ನಂತರ ಈರುಳ್ಳಿ ಹಾಕಿ ಈರುಳ್ಳಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ನಂತರ ಕತ್ತರಿಸಿಟ್ಟುಕೊಂಡ ಅಣಬೆ ಹಾಕಿ ಅದಕ್ಕೆ ಉಪ್ಪು ಹಾಕಿ ಅದು ಕಂದು ಬಣ್ಣ ಬರುವವರೆಗೆ ಬೇಯಿಸಿಕೊಳ್ಳಿ.
ನಂತರ ಅದಕ್ಕೆ ಬೆಳ್ಳುಳ್ಳಿ ಹಾಕಿ. ನಂತರ ಅದಕ್ಕೆ ಜೀರಿಗೆ, ಕೊತ್ತಂಬರಿ ಪುಡಿ, ಅರಿಶಿನ, ಗರಂ ಮಸಾಲ ಹಾಕಿ ನಂತರ ಟೊಮೆಟೊ ಮಿಶ್ರಣ ಹಾಕಿ ಚೆನ್ನಾಗಿ ಕೈಯಾಡಿಸಿ. ನಂತರ ಅದಕ್ಕೆ ನೀರು ಹಾಕಿ ಅದು ಸ್ವಲ್ಪ ದಪ್ಪಗಾಗುವವರೆಗೆ ಕುದಿಸಿಕೊಳ್ಳಿ. ನಂತರ ಗ್ಯಾಸ್ ಆಫ್ ಮಾಡಿ.
PublicNext
30/08/2021 11:42 am