ಹಾಗಲಕಾಯಿ ಎಂದರೆ ಕಹಿ ಎಂದು ಬೇಡ ಅನ್ನುವವರೇ ಜಾಸ್ತಿ ! ಆದರೆ ನಮ್ಮ ಮನೆಯಲ್ಲಿ ಇದಕ್ಕೆ ತದ್ವಿರುದ್ಧ! ನಿಮಗ್ಗೊತ್ತೇ? ಹಾಗಲಕಾಯಿಯಿಂದ ಹಲವಾರು ಬಗೆಗಳನ್ನು ಮಾಡಬಹುದು.ಹಾಗಲಕಾಯಿ ಉಪ್ಪಿನಕಾಯಿ,ಹಾಗಲಕಾಯಿ ಚಿಪ್ಸ್,ಹಾಗಲಕಾಯಿ ಪಲ್ಯ,ಹಾಗಲಕಾಯಿ ಪದಾರ್ಥ, ಹಾಗಲಕಾಯಿ ಕೋಸಂಬರಿ ಹೀಗೆ ಹತ್ತು ಹಲವು ಬಗೆ ಮಾಡಬಹುದು. ಇವತ್ತು ನಾವು ಅಮ್ಮ ಮಾಡುವ ಹಾಗಲಕಾಯಿ ಪಲ್ಯದ ಒಂದು ಬಗೆಯನ್ನು ತಿಳಿಸುತ್ತಿದ್ದೇನೆ. ಕಹಿಯ ಪ್ರಮಾಣ ಸ್ವಲ್ಪ ಕಡಿಮೆ ಆಗಲಿ ಎಂದು ಹಾಗಲಕಾಯಿ ಹೋಳುಗಳನ್ನು ಹೆಚ್ಚಿ ಉಪ್ಪು ಹಾಕಿ ಕಲಸಿಟ್ಟು ಅದರಲ್ಲಿ ನೀರೊಡೆದ ನಂತರ ಹಾಗಲಕಾಯಿ ಹೋಳುಗಳನ್ನು ಚೆನ್ನಾಗಿ ಹಿಂಡಿ ಉಪಯೋಗಿಸಲಾಗಿದೆ. ಹಾಗೆ ಮಾಡಿದಲ್ಲಿ ಹಾಗಲಕಾಯಿ ಸತ್ವ ಹೋಗುತ್ತದೆ ಎಂದು ನಿಮಗೇನಾದರೂ ಅನ್ನಿಸಿದಲ್ಲಿ, ಉಪ್ಪಿನಲ್ಲಿ ಹಾಗಲಕಾಯಿ ಹೋಳುಗಳನ್ನು ನೆನೆಸುವ ಪ್ರಕ್ರಿಯೆಯನ್ನು ಬಿಟ್ಟು ಬಿಡಬಹುದು.ಹಾಗಿದ್ದರೆ ಬನ್ನಿ , ತಡ ಮಾಡದೇ ರುಚಿಯಾದ ಹಾಗಲಕಾಯಿ ಪಲ್ಯದ ವಿಧಾನವನ್ನು ತಿಳಿಯೋಣ.
PublicNext
05/08/2021 04:08 pm