ಬೇಕಾಗುವ ಪದಾರ್ಥಗಳು
• ಅಕ್ಕಿ- 1 ಬಟ್ಟಲು
• ಶುಂಠಿ, ಬೆಳ್ಳುಳ್ಳಿ ಪೇಸ್ಟ್ - 1 ಚಮಚ
• ಅಚ್ಛ ಖಾರದ ಪುಡಿ- 1 ಚಮಚ
• ಉಪ್ಪು- ರುಚಿಗೆ ತಕ್ಕಷ್ಟು
• ಎಣ್ಣೆ-ಸ್ವಲ್ಪ
• ಚಕ್ಕೆ, ಲವಂಗ, ಏಲಕ್ಕಿ, ಮರಾಠಿ ಮೊಗ್ಗು, ಸೋಂಪು- ಸ್ವಲ್ಪ
• ಈರುಳ್ಳಿ - 1 (ಉದ್ದಕ್ಕೆ ಹೆಚ್ಚಿಕೊಂಡಿದ್ದು)
• ಗರಂ ಮಸಾಲೆ ಪುಡಿ - ಅರ್ಧ ಚಮಚ
• ಹಸಿಮೆಣಸಿನಕಾಯಿ-2
• ಟೊಮೆಟೋ-2 (ಉದ್ದಕ್ಕೆ ಹೆಚ್ಚಿಕೊಂಡಿದ್ದು)
• ಮೊಸರು-ಅರ್ಧ ಬಟ್ಟಲು
• ಪುದೀನಾ, ಕೊತ್ತಂಬರಿ ಸೊಪ್ಪು- ಸ್ವಲ್ಪ
• ಅರಿಶಿಣದ ಪುಡಿ- ಸ್ವಲ್ಪ
ಮಾಡುವ ವಿಧಾನ..
•ಮೊದಲಿಗೆ ಒಲೆಯ ಮೇಲೆ ಕುಕ್ಕರ್ ಇಟ್ಟು, ಅದಕ್ಕೆ ಸ್ವಲ್ಪ ಎಣ್ಣೆ ಹಾಕಬೇಕು. ಕಾದ ಬಳಿಕ ಚಕ್ಕೆ ಲವಂಗ, ಎಲಕ್ಕಿ, ಮರಾಠಿ ಮೊಗ್ಗು, ಸೋಂಪು ಎಲ್ಲವನ್ನು ಹಾಕಿ ಕೆಂಪಗೆ ಹುರಿದುಕೊಳ್ಳಬೇಕು.
•ನಂತರ ಈರುಳ್ಳಿ, ಹಸಿಮೆಣಸಿನ ಕಾಯಿ, ಟೊಮೆಟೋ ಎಲ್ಲವನ್ನು ಹಾಕಿ ಚೆನ್ನಾಗಿ ಕೆಂಪಗೆ ಹುರಿದುಕೊಳ್ಳಬೇಕು. ನಂತರ ಅರಿಶಿಣದ ಪುಡಿ, ಖಾರದ ಪುಡಿ, ಗರಂ ಮಸಾಲೆ ಪುಡಿ, ಮೊಸರು, ಉಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಮೊಸರು ಎಲ್ಲವನ್ನೂ ಹಾಕಿ 5 ನಿಮಿಷ ಕುದಿಯಲು ಬಿಟ್ಟು, ನೆನೆಸಿಟ್ಟುಕೊಂಡ ಅಕ್ಕಿಯನ್ನೂ ಹಾಕಿ 5 ನಿಮಿಷ ಬಿಡಬೇಕು.
•ಬಳಿಕೆ ಅಳತೆಯಷ್ಟು 2 ಬಟ್ಟಲು ನೀರು ಹಾಕಿ ಕುಕ್ಕುರ್ ಮುಚ್ಚಳವನ್ನು ಮುಚ್ಚಿ 1-2 ಕೂಗು ಕೂಗಿಸಿಕೊಂಡರೆ ರುಚಿಕರವಾದ ಕುಷ್ಕಾ ರೈಸ್ ಸವಿಯಲು ಸಿದ್ಧ.
PublicNext
29/12/2020 03:33 pm