ಮೊಟ್ಟೆಯ ಉಯೋಗ ಎಲ್ಲರಿಗೂ ಗೊತ್ತು ಆದ್ರೆ ಅದರ ಸಿಪ್ಪೆಯಿಂದಲೂ ಉಪಯೋಗವಿದೆ ನಿಮ್ಗೆ ಗೊತ್ತಾ?
ಹೌದು ಮೊಟ್ಟೆಯ ಸಿಪ್ಪೆಯಿಂದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು.
ಹೌದು, ಮೊಟ್ಟೆಯ ಸಿಪ್ಪೆಯಲ್ಲಿ 750-800 ಮಿ.ಗ್ರಾಂ. ಕ್ಯಾಲ್ಸಿಯಂ ಇದೆ. ಇದು ತ್ವಚೆಯ ಸತ್ತ ಕೋಶಗಳನ್ನು ತೆಗೆದು ನಯವಾದ ಚರ್ಮ ಬರುವಂತೆ ಮಾಡುತ್ತದೆ.
ಹಾಗೇ ಕಲೆ ಹಾಗೂ ಬಿಸಿಲಿನ ಸುಟ್ಟ ಕಲೆಗಳನ್ನು ತೆಗೆದು ಚರ್ಮದ ಕಾಂತಿ ವೃದ್ಧಿಸುತ್ತದೆ.
ಮಿಶ್ರಣ ತಯಾರಿಸುವುದು ಹೇಗೆ.?
2 ಮೊಟ್ಟೆಯ ಸಿಪ್ಪೆಯನ್ನು ಹುಡಿ ಮಾಡಿ ಮತ್ತು ಇದಕ್ಕೆ ಒಂದು ಅರ್ಧ ಪಿಂಗಾಣಿಯಷ್ಟು ಆಪಲ್ ಸೀಡರ್ ವಿನೇಗರ್ ಹಾಕಿ. ಐದು ದಿನಗಳ ಕಾಲ ಹಾಗೆ ನೆನೆಯಲು ಬಿಡಿ.
ನಂತರ ಒಂದು ಹತ್ತಿ ಉಂಡೆಯನ್ನು ಇದರಲ್ಲಿ ಅದ್ದಿಕೊಳ್ಳಿ ಮತ್ತು ಅದನ್ನು ತ್ವಚೆಗೆ ಹಚ್ಚಿಕೊಳ್ಳಿ. ಕೆಲವು ನಿಮಿಷ ಕಾಲ ಹಾಗೆ ಬಿಡಿ ಬಳಿಕ ತೊಳೆಯಿರಿ.
ಹೀಗೆ ವಾರದಲ್ಲಿ 2 ಸಲ ಮಾಡಿ. ಇದು ನೆರಿಗೆ ಮತ್ತು ಗೆರೆ ಮೂಡುವುದನ್ನು ತಡೆಯುತ್ತದೆ. ಅಲ್ಲದೇ ಕಪ್ಪು ಕಲೆ ನಿವಾರಣೆ ಮಾಡುತ್ತದೆ.
PublicNext
04/10/2020 08:01 am