ನಾನ್-ವೆಜ್ ಪ್ರಿಯರು ಹೊಸ ಹೊಸ ರೆಸಿಪಿಯನ್ನು ಹುಡುಕುತ್ತಾರೆ. ಅವರಿಗಾಗಿಯೇ ಇಂದು ಲೆಮನ್ ಪೆಪ್ಪರ್ ಚಿಕನ್ ಫ್ರೈ ಮಾಡುವ ವಿಧಾನವನ್ನು ತಿಳಿಸುತ್ತಿದ್ದೇವೆ. ಕಡಿಮೆ ಸಮಯದಲ್ಲಿ ಲೆಮನ್ ಪೆಪ್ಪರ್ ಚಿಕನ್ ಫ್ರೈ ತಯಾರಿಸಿ ಬಾಯಿ ಚಪ್ಪರಿಸಿಕೊಂಡು ತಿನ್ನಬಹುದಾಗಿದೆ.
ಬೇಕಾಗುವ ಸಾಮಾಗ್ರಿಗಳು: ಚಿಕನ್-1/2 ಕೆಜಿ, ಹಸಿ ಮೆಣಸಿನಕಾಯಿ- 4 ರಿಂದ 8, ಕೋತಂಬರಿ ಸೊಪ್ಪು, ಮೊಸರು- 1 ಕಪ್, ಬೆಣ್ಣೆ- 1 ಟಿ ಸ್ಪೂನ್, ಚಕ್ಕೆ- ಸ್ಪಲ್ಪ, ಲವಂಗ-3 ರಿಂದ 4, ಏಲಕ್ಕಿ -2 ರಿಂದ 3, ಪೆಪ್ಪರ್ ಪೌಡರ್- 1 ಟೀ ಸ್ಪೂನ್, ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀ ಸ್ಪೂನ್, ನಿಂಬೆ ರಸ- 2 ಟೀ ಸ್ಪೂನ್, ಕಾಳು ಮೆಣಸು- 4 ರಿಂದ 5, ಎಣ್ಣೆ, ಉಪ್ಪು-ರುಚಿಗೆ ತಕ್ಕಷ್ಟು.
ಮಾಡುವ ವಿಧಾನ: ಮೊದಲಿಗೆ ಚಿಕನ್ ಲೆಗ್ ಪೀಸ್ಗಳನ್ನು ಕತ್ತರಿಸಿಕೊಂಡು ಬಿಸಿ ನೀರಿನಲ್ಲಿ ಚೆನ್ನಾಗಿ ತೊಳೆಯಬೇಕು. ಇತ್ತ ಮಿಕ್ಸಿಂಗ್ ಬೌಲ್ಗೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಉಪ್ಪು, ನಿಂಬೆ ರಸ, ಎರಡು ಟೀ ಸ್ಪೂನ್ ಮೊಸರು, ಪೆಪ್ಪರ್ ಪೌಡರ್ ಸೇರಿಸಿ ಚಿಕನ್ ಜೊತೆಗೆ ಚೆನ್ನಾಗಿ ಮಿಕ್ಸ್ ಮಾಡಿ, ಮುಚ್ಚಳ ಮುಚ್ಚಿ ಒಂದು ಗಂಟೆ ಎತ್ತಿಡಿ. ಬಳಿಕ ಸ್ಟೌವ್ ಮೇಲೆ ಪ್ಯಾನ್ ಇಟ್ಟುಕೊಂಡು ಮೂರು ಟೀ ಸ್ಪೂನ್ ಎಣ್ಣೆ, ಒಂದು ಟೀ ಸ್ಪೂನ್ ಬೆಣ್ಣೆ ಹಾಕಿ. ಎಣ್ಣೆ ಬಿಸಿಯಾಗತ್ತಿದ್ದಂತೆ ಕಡಿಮೆ ಉರಿಯಲ್ಲಿ ಕಾಳು ಮೆಣಸು, ಚಕ್ಕೆ, ಲವಂಗ ಮತ್ತು ಏಲಕ್ಕಿ ಹಾಕಿ ಚೆನ್ನಾಗಿ ಬಾಡಿಸಿಕೊಳ್ಳಿ. ಮಸಾಲೆ ಕಂದು ಬಣ್ಣಕ್ಕೆ ತಿರುಗಿದಾದ ಮಸಾಲೆಯಲ್ಲಿ ಮಿಕ್ಸ್ ಮಾಡಿರುವ ಚಿಕನ್ ಪೀಸ್ ಒಂದೊಂದಾಗಿ ಬಾಣಲೆಗೆ ಹಾಕಿಕೊಳ್ಳಿ. ಎರಡು ನಿಮಿಷ ನಂತರ ಚಿಕನ್ ಪೀಸ್ ಪ್ಲಿಪ್ ಮಾಡಿ. ಐದು ನಿಮಿಷಗಳ ನಂತರ ಚಿಕನ್ ಗೆ ಮೂರರಿಂದ ನಾಲ್ಕು ಟೀ ಸ್ಪೂನ್ ಮೊಸರು, ಪೆಪ್ಪರ್ ಪೌಡರ್, ಕತ್ತರಿಸಿ ಮೆಣಸಿನ ಕಾಯಿ ಹಾಕಿ ಕಡಿಮೆ ಉರಿಯಲ್ಲಿ ಮೂರು ನಿಮಿಷವರೆಗೆ ಬೇಯಿಸಿ, ಕೋತಂಬರಿ ಸೊಪ್ಪು ಉದುರಿಸಿದ್ರೆ ಲೆಮನ್ ಪೆಪ್ಪರ್ ಚಿಕನ್ ಫ್ರೈ ರೆಡಿ.
PublicNext
20/09/2020 11:46 am