ಅವಲಕ್ಕಿಯನ್ನು ಬಳಸಿ ಅನೇಕ ರೀತಿಯ ಅಡುಗೆಗಳನ್ನು ತಯಾರಿಸುತ್ತೇವೆ, ಇಂದು ನಿಮಗಾಗಿ ಅವಲಕ್ಕಿಯನ್ನು ಬಳಸಿ ಪುಲಾವ್ ತಯಾರಿಸುವ ವಿಧಾನವನ್ನು ತಂದಿದ್ದೇವೆ.
ಬೇಕಾಗುವ ಪದಾರ್ಥಗಳು :
* ಅವಲಕ್ಕಿ/ಪೋಹಾ 1ಕಪ್
* ಬೀನ್ಸ್ , ಕ್ಯಾರಟ್, ಆಲೂಗಡ್ಡೆ, ದಪ್ಪಮೆಣಸಿನಕಾಯಿ (ಎಲ್ಲವೂ ಸೇರಿ ಒಂದು ಕಪ್ ತರಕಾರಿಗಳು )
* ಉದ್ದಕ್ಕೆ ಹೆಚ್ಚಿದ ಈರುಳ್ಳಿ 2
* ಹಸಿಮೆಣಸಿನಕಾಯಿ 2
* ಶುಂಠಿಬೆಳ್ಳುಳ್ಳಿ ಪೇಸ್ಟ್ 1 ಚಮಚ
* ಪುಲಾವ್ ಎಲೆ 2
* ಉಪ್ಪು ರುಚಿಗೆ ತಕ್ಕಷ್ಟು
* ಚಕ್ಕೆ 2
* ಲವಂಗ 2
* ಮರಾಠಿ ಮೊಗ್ಗು 2
* ಕಾಳುಮೆಣಸು 2
* ಏಲ್ಲಕ್ಕಿ 2
* ಹಸಿಬಟಾಣಿ 1 ಕಪ್
* ತುಪ್ಪ 2 ಚಮಚ
* ಎಣ್ಣೆ 2 ಚಮಚ
* ಬೆಣ್ಣೆ 2 ಚಮಚ
* ಗೋಡಂಬಿ 6-7
* ದ್ರಾಕ್ಷಿ 6-7
* ಬಾದಾಮಿ 6-7
* ದಾಳಿಂಬೆ 1/4 ಕಪ್
* ಅಚ್ಚಖಾರದ ಪುಡಿ 1 ಚಮಚ
* ಗರಂಮಸಾಲಾ 2 ಚಮಚ
* ಕೊತ್ತಂಬರಿ ಸೊಪ್ಪು
* ಕರಿಬೇವು ಸೊಪ್ಪು
ತಯಾರಿಸುವ ವಿಧಾನ :-
ಹಸಿಬಟಾಣಿ ಮತ್ತು ಹೆಚ್ಚಿದ ತರಕಾರಿಗಳು ( ಬೀನ್ಸ್, ಕ್ಯಾರಟ್ ಮತ್ತು ಆಲೂಗಡ್ಡೆ ) ಗಳನ್ನು ಬೇಯಿಸಿಕೊಳ್ಳಿ.
ನಂತರ ತವಾಗೆ ಎಣ್ಣೆ ತುಪ್ಪ ಬೆಣ್ಣೆ ಹಾಕಿ ಬಿಸಿ ಮಾಡಿ. ನಂತರ ಪುಲಾವ್ ಎಲೆ, ಚಕ್ಕೆ, ಲವಂಗ, ಮರಾಠಿ ಮೊಗ್ಗು, ಕಾಳುಮೆಣಸು ಏಲ್ಲಕ್ಕಿ, ಹಸಿಮೆಣಸಿನಕಾಯಿ, ಶುಂಠಿಬೆಳ್ಳುಳ್ಳಿ ಪೇಸ್ಟ್ ಈ ಎಲ್ಲವನ್ನು ಒಂದೊಂದಾಗಿ ಹಾಕಿ ಚೆನ್ನಾಗಿ ಫ್ರೈ ಮಾಡಿ.
ನಂತರ ಈರುಳ್ಳಿ, ದಪ್ಪಮೆಣಸಿನಕಾಯಿ ಹಾಕಿ ಫ್ರೈ ಮಾಡಿ. ಜೊತೆಗೆ ಬೇಯಿಸಿದ ಬಟಾಣಿ, ತರಕಾರಿಗಳು, ಅಚ್ಚಖಾರದ ಪುಡಿ, ಗರಂಮಸಾಲಾ ಹಾಕಿ ಮಿಕ್ಸ್ ಮಾಡಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ನೆನೆಸಿದ ಅವಲಕ್ಕಿ ಹಾಕಿ ಮಿಕ್ಸ್ ಮಾಡಿ.
ಮತ್ತೊಂದು ಪ್ಯಾನ್ ಗೆ ತುಪ್ಪ ಕಟ್ ಮಾಡಿದ ಬಾದಾಮಿ, ಗೋಡಂಬಿ ಹಾಕಿ ಫ್ರೈ ಮಾಡಿ. ನಂತರ ಫ್ರೈ ಮಾಡಿದ ಡ್ರೈ ಫ್ರೂಟ್ಸ್ , ದಾಳಿಂಬೆ, ದ್ರಾಕ್ಷಿ, ಕೊತ್ತಂಬರಿ ಸೊಪ್ಪು ಎಲ್ಲವನ್ನು ಅವಲಕ್ಕಿ ಪುಲಾವ್ ಇರುವ ಪ್ಯಾನ್ ಗೆ ಹಾಕಿಚೆನ್ನಾಗಿ ಮಿಕ್ಸ್ ಮಾಡಿ.
ಈಗ ಅವಲಕ್ಕಿ ಪುಲಾವ್ ಸವಿಯಲು ಸಿದ್ಧ.
PublicNext
26/09/2020 02:48 pm