ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ: ರಾಜ್ಯ ಸರ್ಕಾರ ಮಧ್ಯರಾತ್ರಿ ಕಾರ್ಯಾಚರಣೆ ಮಾಡುತ್ತಿದೆ: ಮಾಜಿ ಸಿಎಂ ಕುಮಾರಸ್ವಾಮಿ

ಕೋಲಾರ: ಪಿಎಫ್ಐ ಸಂಘಟನೆ ಬ್ಯಾನ್ ವಿಚಾರವಾಗಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ರಾಜ್ಯ ಸರ್ಕಾರ ಮಧ್ಯರಾತ್ರಿ ಕಾರ್ಯಾಚರಣೆ ಮಾಡುತ್ತಿದೆ. ಪಿಎಫ್ಐ ಸೇರಿ ಹಲವಾರು ಸಂಘಟನೆಗಳನ್ನು ಬ್ಯಾನ್ ಮಾಡಿದ್ದಾರೆ, ಯಾವ್ಯಾವ ನಾಯಕರು ಏನೇನೂ ಹೇಳಿಕೆ ಕೊಡುತ್ತಾರೆ ಅನ್ನೋದನ್ನ ಎಲ್ಲರೂ ಗಮನಿಸುತ್ತಿದ್ದಾರೆ. ಯಾವ ಕಾರಣಕ್ಕೆ ಬ್ಯಾನ್ ಆಯ್ತು ಎಂದು ಸರ್ಕಾರ ಜನರಿಗೆ ತಿಳಿಸಲಿ. ಹಿಂದೂ ರಾಷ್ಟ್ರ ಅದರದೇ ಆಗಿರುವ ಬಲಾಢ್ಯ ಹೊಂದಿದೆ. ಸುಮ್ಮನೆ ಕಾರಣ ನೀಡಿ ಜನರಿಗೆ ಭಯದ ವಾತಾವರಣ ನಿರ್ಮಾಣ ಮಾಡೋ ಕೆಲಸ ಆಗಬಾರದು ಎಂದರು.

ಇನ್ನು ಆರ್‌ಎಸ್‌ಎಸ್‌ನ ಬ್ಯಾನ್ ಮಾಡಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಹೆಚ್.ಡಿ ಕುಮಾರಸ್ವಾಮಿ. ನೆಹರು ಪ್ರಧಾನಿ ಇದ್ದಾಗ, ಮಹಾತ್ಮಾ ಗಾಂಧೀಜಿ ಹತ್ಯೆ ಆದಾಗ RSS ಬ್ಯಾನ್ ಮಾಡಲಾಗಿತ್ತು. ನಿಷೇಧವನ್ನು ವಾಪಸ್ ಪಡೆದಾಗ ಕೆಲವು ಗೈಡ್ ಲೈನ್ಸ್‌ಗಳನ್ನು RSS ಗೆ ನೀಡಲಾಗಿತ್ತು. ಯಾಕೆ ಬ್ಯಾನ್ ಎಂದು ಹೇಳಬೇಕಲ್ಲ, ಈ ಹಿಂದೆ ಬ್ಯಾನ್ ಮಾಡಿದ್ದು ಇದೆ. ಆದ್ರೆ ಯಾವ ಕಾರಣಕ್ಕೆ ಬ್ಯಾನ್ ಮಾಡಬೇಕು ಅನ್ನೋದನ್ನು ಸಹ ಜನರ ಮುಂದೆ‌ ಹೇಳಬೇಕಾಗಿದೆ ಎಂದರು.

ಇನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೋಲಾರದಲ್ಲಿ ಸ್ಪರ್ದಿಸುವ ಕುರಿತು ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ,ಸಂವಿಧಾನದಲ್ಲಿ ಯಾರು ಎಲ್ಲಿ ಬೇಕಾದರೂ ಸ್ಪರ್ದಿಸಬಹುದು.ಅವರು ಎಲ್ಲಿ ಬೇಕಾದ್ರೂ ಸ್ಪರ್ದಿಸಲಿ,ನಾನು ಚರ್ಚೆ ಮಾಡೋದಿಲ್ಲ. ಕರ್ನಾಟಕದ ಭೂಮಿ ನಮಗೆ ಸಾಗುವಳಿ ಚೀಟಿ ಇದ್ದಂಗೆ.ನಾವು ಅಧಿಕಾರಕ್ಕೆ ಬರೋದು ನಮ್ಮ ಗುರಿ. ಸಾಗುವಳಿ ಚೀಟಿಯಲ್ಲಿ ಕೆಲಸ ಮಾಡಿದ್ರೆ ಬಗರ್ ಹುಕ್ಕುಂ ಜಾಗ ಹುಡುಕಿಕೊಂಡು ಹೋಗೋದಕ್ಕೆ ಆಗುತ್ತಾ ಎಂದರು.

ರಾಜ್ಯದಲ್ಲಿ ಪೇಸಿಎಂ ಎಂದು ಚರ್ಚೆ ಆಗ್ತಿದೆ. ಇದು ನಮ್ಮ ರಾಜ್ಯದ ಜನತೆಗೆ ಅವಶ್ಯಕತೆ ಇಲ್ಲ. 17 ಸಾವಿರ ಕೋಟಿ ವೆಚ್ಚದ ಮನೆ ನಷ್ಟವಾಗಿದೆ. ರೈತರಿಗೆ ಪರಿಹಾರ, ಬೆಳೆ ನಾಶದ ಬಗ್ಗೆ ಗಮನಹರಿಸಬೇಕಾಗಿದೆ ಎಂದು ಸಲಹೆ ನೀಡಿದ್ರು.

ಕಾಂಗ್ರೆಸ್‌ನವ್ರು ಭಾರತ್ ಜೋಡೋ ಕಾರ್ಯಕ್ರಮದ ಬಗ್ಗೆ ನಾನು ಚರ್ಚೆ ಮಾಡೋದಿಲ್ಲ. ಈಗೇನು ಭಾರತ ಹೊಡೆದು ಹೋಗಿದಿಯ ಆಗಿದ್ರೆ.ಇದು ಕಾಂಗ್ರೆಸ್ ನ ಒಗ್ಗೂಡಿಸುವ ಕಾರ್ಯಕ್ರಮ.ಅವರದು ಭಾರತ ಜೋಡೋ ಅಲ್ಲ. ಇದು ಕಾಂಗ್ರೆಸ್ ಜೋಡೋ ಕಾರ್ಯಕ್ರಮ ಅಂತ ವ್ಯಂಗ್ಯವಾಡಿದರು.

Edited By : Shivu K
PublicNext

PublicNext

30/09/2022 02:08 pm

Cinque Terre

25 K

Cinque Terre

1

ಸಂಬಂಧಿತ ಸುದ್ದಿ