ಕೋಲಾರ: ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಉಲ್ಲೇರಹಳ್ಳಿ ಗ್ರಾಮದ ದಲಿತ ನಿವಾಸಿಗಳಾದ ಶೋಭಾ ಹಾಗೂ ರಮೇಶ್ ನಿವಾಸಕ್ಕೆ, ಛಲವಾದಿ ಮಹಾಸಭಾ ರಾಜ್ಯಾಧ್ಯಕ್ಷ್ಯ ಕೆ ಶಿವರಾಂ ಭೇಟಿ ನೀಡಿ, ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
ಕೆ.ಶಿವರಾಂ ಅವರು ಸಂಘಟನೆಯಿಂದ 50 ಸಾವಿರ ರೂ. ಪರಿಹಾರದ ಚೆಕ್ ವಿತರಣೆ ಮಾಡಿದರು. ಗ್ರಾಮದಲ್ಲಿನ ಭೂತಮ್ಮ ದೇವಿಯ ಗುಜ್ಜಕೋಲು ಮುಟ್ಟಿದ್ದಕ್ಕೆ, ದಲಿತ ಕುಟುಂಬಕ್ಕೆ ದಂದ ವಿಧಿಸಿ ದೌರ್ಜನ್ಯ ನಡೆಸಿದ ಘಟನೆಯನ್ನ ಕೆ ಶಿವರಾಂ ಖಂಡಿಸಿದ್ದಾರೆ. ಹಲವು ದಲಿತ ಮುಖಂಡರೊಂದಿಗೆ ನೊಂದವರ ಮನೆಗೆ ತೆರಳಿ ಧೈರ್ಯ ತುಂಬಿದರು.
ಇದೇ ವೇಳೆ ಮಾತನಾಡಿದ ಕೆ.ಶಿವರಾಂ ಅವರು, ಸವರ್ಣೀಯರು ಶೋಷಿತ ಸಮುದಾಯದವರ ಮೇಲೆ ಇನ್ನಾದರು ದೌರ್ಜನ್ಯ ನಡೆಸುವುದನ್ನ ಬಿಡಬೇಕಿದೆ. ನೊಂದ ಶೋಭಾ ಅವರ ಕುಟಂಬಕ್ಕೆ ಈಗಾಗಲೇ ಸರ್ಕಾರ ನೆರವು ನೀಡಿ, ಕಾನೂನು ಕ್ರಮ ಕೈಗೊಂಡಿದೆ. ದಲಿತ ದೌರ್ಜನ್ಯ ಕಾನೂನಿನಡಿ ಸರ್ಕಾರದಿಂದ 2 ಎಕರೆ ಜಮೀನು ಮಂಜೂರು ಮಾಡಿಸುವ ವಿಚಾರವಾಗಿ ಸರ್ಕಾರದ ಗಮನ ಸೆಳೆದು ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿದರು.
PublicNext
25/09/2022 10:48 pm