ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ ಜಿಲ್ಲೆಯ ಹಲವೆಡೆ ಹಸುಗಳಲ್ಲಿ ಚರ್ಮ ಗಂಟು ಕಾಯಿಲೆ ಪತ್ತೆ

ಕೋಲಾರ: ಜಿಲ್ಲೆಯ ಹಲವೆಡೆ ಹಸುಗಳಲ್ಲಿ ಚರ್ಮಗಂಟು ರೋಗವೊಂದು ಕಾಣಿಸಿಕೊಂಡಿದ್ದು, ಮೂಲಕ ಹಾಲು ಉತ್ಪಾದಕರಿಗೆ ಆತಂಕ ಉಂಟು ಮಾಡಿದೆ.

ಒಂದು ಹಸುವಿನಿಂದ ಮತ್ತೊಂದು ಹಸುವಿಗೆ ಬೇಗನೇ ಹರಡುವ ವೈರಸ್ ಇದಾಗಿದ್ದು, ಹಸುಗಳು ಆಹಾರ ನೀರು ತಿನ್ನೋದನ್ನು ಬಿಟ್ಟು ಏಕಾಏಕಿ ಹಸುಗಳು ಬಡಕಲಾಗುತ್ತವೆ. ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಹೋಬಳಿಯ ಪಚ್ಚಾರ್ಲಹಳ್ಳಿ, ಬೀಮಗಾನಹಳ್ಳಿ, ಕಾರಮಾನ ಹಳ್ಳಿ ಸೇರಿದಂತೆ ಹಲವು ಹಳ್ಳಿಗಳಲ್ಲಿ ರೋಗ ಉಲ್ಬಣವಾಗಿದ್ದು, ಈ ಭಾಗದ ರೈತರಿಗೆ ಆತಂಕ ಎದುರಾಗಿದೆ. ಈವರೆಗೆ 900ಕ್ಕೂ ಹೆಚ್ಚು ಹಸುಗಳಲ್ಲಿ ಈ ರೋಗ ಕಂಡು ಬಂದಿದ್ದು, 500ಕ್ಕೂ ಹೆಚ್ಚು ಹಸುಗಳು ಈಗಲೂ ಗಂಟು ರೋಗದಿಂದ ಬಳಲುತ್ತಿವೆ. ಇದುವರೆಗೂ ನಾಲ್ಕು ಹಸುಗಳು ಸಾವನ್ನಪ್ಪಿವೆ.

ವರದಿ : ರವಿ ಕುಮಾರ್, ಕೋಲಾರ.

Edited By : Nagesh Gaonkar
PublicNext

PublicNext

24/09/2022 05:19 pm

Cinque Terre

17.32 K

Cinque Terre

0

ಸಂಬಂಧಿತ ಸುದ್ದಿ