ಕೋಲಾರ : ಕಂದಾಯ ಆದಾಲತ್ ನಲ್ಲಿ 350 ರಿಂದ ರೂ 450 ಪ್ರಕರಣಗಳು ರಾಜಿ ಮೂಲಕ ಇತ್ಯರ್ಥವಾಗಿರುವುದು ಉತ್ತಮ ಬೆಳವಣಿಗೆಯಾಗಿದ್ದು ನ್ಯಾಯಾಲಯಗಳಿಗೆ ಅಲೆದಾಟ ತಪ್ಪಿಸಿ ಸೌಹಾರ್ದಯುತ ಜೀವನ ನಡೆಸಲು ಸಹಕಾರಿಯಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸುನಿ ಲ್ ಎಸ್ ಹೊಸಮನಿ ತಿಳಿಸಿದರು.
ನಗರದ ಸಹಾಯಕ ಕಮಿಷನರ್ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಂದಾಯ ಇಲಾಖೆ ಉಪ ವಿಭಾಗ ಅಧಿಕಾರಿಗಳ ಕಚೇರಿ ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ನ ಭಾಗವಾಗಿ ನಡೆದ ಕಂದಾಯ ಆದಾಲತ್ ಗೆ ಚಾಲನೆ ನೀಡಿ ಮಾತನಾಡಿದರು. ಪ್ರತಿ ರಾಷ್ಟ್ರೀಯ ಲೋಕ ಆದಾಲತ್ ಸಂದರ್ಭದಲ್ಲೂ ಕಂದಾಯ ಆದಾಲತ್ ನಡೆಸುವ ಮೂಲಕ ಉಪವಿಭಾಗಧಿಕಾರಿ ಡಾ. ಮೈತ್ರಿ ಸಹಕಾರ ನೀಡಿದ್ದು, ಇದರಿಂದ ಪ್ರತಿ ಆದಾಲತ್ ನಲ್ಲೂ ಕನಿಷ್ಟ 350 ರಿಂದ 450 ರವರೆಗೂ ಕೇಸ್ ಗಳು ರಾಜಿ ಮೂಲಕ ಇತ್ಯರ್ಥಗೊಳ್ಳುತ್ತಿರುವುದು ಉತ್ತಮ ಬೆಳವಣಿಗೆ ಎಂದು ತಿಳಿಸಿದರು.
Kshetra Samachara
14/12/2024 07:16 pm