ಕೋಲಾರ: ಕೋಲಾರ ತಾಲೂಕಿನ ಸಮೀಪ ಅಂತರರಾಷ್ಟ್ರೀಯ ಮಟ್ಟದ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಹೆಚ್ಚುವರಿ ಜಾಗ ಮಂಜೂರು ಮಾಡುವಂತೆ ಒತ್ತಾಯಿಸಿ ರಾಜ್ಯ ಕ್ರಿಕೆಟ್ ಸಂಸ್ಥೆಯ ಸದಸ್ಯರು ಜಿಲ್ಲಾಧಿಕಾರಿ ಅಕ್ರಂಪಾಷ್ ಅವರಿಗೆ ಮನವಿಯನ್ನು ಸಲ್ಲಿಸಿದರು.
ಈ ಹಿಂದೆಯೇ ಕ್ರಿಕೆಟ್ ಸಂಸ್ಥೆಗೆ ತಾಲೂಕಿನ ಹೊಳಲಿ ಸಮೀಪ 16 ಎಕರೆ ಜಾಗವನ್ನು 30 ವರ್ಷಗಳಿಗೆ ಬೋಗ್ಯಕ್ಕೆ ನೀಡಲಾಗಿತ್ತು. ಇದಕ್ಕೆ ಜಿಲ್ಲಾಡಳಿತವು ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಆದರೆ 16 ಎಕರೆ ಜೊತೆಗೆ ಸ್ವಂತಕ್ಕೆ 28 ಜಾಗ ನೀಡಿದರೆ ಖರೀದಿ ಮಾಡಿಕೊಳ್ಳಲಾಗುವುದು ಎಂದು ಸಂಸ್ಥೆಯ ಪದಾಧಿಕಾರಿಗಳು ಮನವಿಯನ್ನು ಮಾಡಿಕೊಂಡಿದ್ದಾರೆ.
ಕೋಲಾರ ತಾಲೂಕು ಹೊಳಲಿ ಗ್ರಾಮದ 16 ಎಕರೆ ಸರ್ಕಾರಿ ಗೋಮಾಳ ಜಾಗದಲ್ಲಿ ಬೆಂಗಳೂರಿನ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣ ನಿರ್ಮಾಣಕ್ಕೆ ತೀರ್ಮಾನಿಸಿತ್ತು. ಇದಕ್ಕೆ ಸ್ಪಂದಿಸಿದ ಅಂದಿನ ಜಿಲ್ಲಾಧಿಕಾರಿ ಜೆ ಮಂಜುನಾಥ್ ಅವರು, ಕರ್ನಾಟಕ ಭೂ ಮಂಜೂರಾತಿ 1969ರ ನಿಯಮ 22 (ಎ) 1, 6 ಅನ್ವಯ ಮಾರ್ಗಸೂಚಿ ಬೆಲೆಯ ಶೇಕಡಾ 5ರಷ್ಟು 16 ಎಕರೆ ಜಮೀನಿಗೆ ವಾರ್ಷಿಕ ಗುತ್ತಿಗೆ ದರ ನಿಗದಿ ಪಡಿಸಿ ಸಂಸ್ಥೆಗೆ ಜಾಗ ಮಂಜೂರು ಮಾಡಿದ್ದರು. ಇದರಿಂದಾಗಿ ಸ್ಥಳೀಯ ಕ್ರೀಡಾಪಟುಗಳಿಗೆ ಅನುಕೂಲವಾಗದೆ ಎಂಬ ನಿರೀಕ್ಷಿಯತ್ತು. ಆದರೆ ಸಂಸ್ಥೆಯವರು ಕ್ರೀಡಾಂಗಣ ನಿರ್ಮಾಣ ಮಾಡಲು ವಿಳಂಬ ಮಾಡುತ್ತಿದ್ದರು. ಆದರೆ ಈಗ ಹೆಚ್ಚುವರಿ ಜಾಗಕ್ಕೆ ಒತ್ತಾಯಿಸಿದ್ದಾರೆ.
PublicNext
05/10/2024 05:34 pm