ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ - ಸಿಲಂಬಮ್ ಸ್ಪರ್ದೆ: ಪದಕಗಳ ಕೊಳ್ಳೆ ಹೊಡೆದ ಕೊಪ್ಪಳ ಜಿಲ್ಲೆ ಸ್ಪರ್ಧಿಗಳು

ಕೋಲಾರ : ಪದವಿ ಪೂರ್ವ ಶಿಕ್ಷಣ ಇಲಾಖೆ ಬೆಂಗಳೂರು ಹಾಗೂ ಕೋಲಾರ ಜಿಲ್ಲೆ ಮತ್ತು ತಾಲೂಕಿನ ಚೊಕ್ಕಹಳ್ಳಿಯ ಚಿನ್ಮಯ ಪದವೀ ಪೂರ್ವ ಕಾಲೇಜು ಸಂಯುಕ್ತಾಶ್ರಯದಲ್ಲಿ ಆಯೋಜಸಿದ್ದ ರಾಜ್ಯಮಟ್ಟದ ಸಿಲಂಬಮ್ ಸ್ಪರ್ದೆ ಯಶಸ್ವಿಯಾಗಿ ನೆರವೇರಿತು. ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಚೊಕ್ಕಹಳ್ಳಿ ಪದವೀ ಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸಿಲಂಬಮ್ (ದೊಣ್ಣೆ/ಕೋಲು ವರಸೆ) ಸ್ಪರ್ದೆಯಲ್ಲಿ ರಾಜ್ಯದ 8 ಜಿಲ್ಲೆಗಳಿಂದ (ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಧಾರವಾಡ, ಮೈಸೂರು, ಬೀದರ್, ದಕ್ಷಿಣ ಕನ್ನಡ, ಬೆಳಗಾವಿ ಮತ್ತು ಕೊಪ್ಪಳ) ಬಾಲಕರು ಹಾಗೂ ಬಾಲಕಿಯರು ತಲಾ 8 ಮಂದಿಯಂತೆ 120 ಮಂದಿ ಸ್ಪರ್ಧಾಳುಗಳು ಭಾಗವಹಿಸಿದ್ದರು. ತೀವ್ರ ಸೆಣಸಾಟ, ಹಣಾಹಣಿ, ಅತ್ಯುತ್ಸಾಹ, ಚಾಕಚಕ್ಯತೆಯಲ್ಲಿ ನಡೆದ ಈ ದೊಣ್ಣೆ ವರಸೆಯಲ್ಲಿ ಅತಿಹೆಚ್ಚು ಚಿನ್ನ ಹಾಗೂ ಬೆಳ್ಳಿ ಪದಕಗಳನ್ನು ಬಾಚಿಕೊಳ್ಳುವ ಮೂಲಕ ಕೊಪ್ಪಳ ಜಿಲ್ಲೆಯ ಬಾಲಕರು ಹಾಗೂ ಬಾಲಕಿಯರ ಎರಡೂ ವಿಭಾಗವು ಪ್ರತ್ಯೇಕವಾಗಿ ಸಮಗ್ರ ಪ್ರಶಸ್ತಿಗಳನ್ನು ತಮ್ಮ ಮುಡಿಲಿಗೇರಿಸಿಕೊಂಡವು.

Edited By : PublicNext Desk
Kshetra Samachara

Kshetra Samachara

16/12/2024 07:14 pm

Cinque Terre

280

Cinque Terre

0