ಮುಳಬಾಗಿಲು - ಕೃಷಿ ಕ್ಷೇತ್ರವನ್ನು ಬಹುರಾಷ್ಟ್ರೀಯ ಕಂಪನಿಗಳ ಕಪಿಮುಷ್ಠಿಯಿಂದ ವಿಮುಕ್ತಿಗೊಳಿಸದೇ ಹೋದರೆ ಆಹಾರಕ್ಕಾಗಿಯೇ 3ನೇ ಮಹಾಯುದ್ಧ ಪ್ರಾರಂಭವಾಗುವ ಕಾಲ ದೂರವಿಲ್ಲವೆಂದು ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಸರ್ಕಾರಗಳಿಗೆ ಎಚ್ಚರಿಕೆಯ ಜೊತೆಗೆ ಸಲಹೆ ನೀಡಿದರು. ತಾಲೂಕು ಕಚೇರಿ ಆವರಣದಲ್ಲಿ ಎನ್.ಡಿ. ಸುಂದರೇಶ್ ನೆನಪಿನ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೃಷಿ ಕ್ಷೇತ್ರ ದಿನೇದಿನೇ ಅವನತಿಯತ್ತ ಸಾಗುತ್ತಿದೆ. ಕೃಷಿ ಮಾಡುತ್ತಿರುವವರ ಸಂಖ್ಯೆ ಕ್ಷೀಣಿಸುತ್ತಿದೆ. ದುಬಾರಿಯಾಗುತ್ತಿರುವ ಕೃಷಿ ಬಂಡವಾಳ, ನಿಯಂತ್ರಣಕ್ಕೆ ಬಾರದ ರೋಗಗಳು, ರೈತರನ್ನು ಸುಡುತ್ತಿರುವ ನಕಲಿ ಬಿತ್ತನೆ ಬೀಜ, ಕೀಟನಾಶಕಗಳ ನಿಯಂತ್ರಣವಿಲ್ಲದೆ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದ ಸರ್ಕಾರಗಳ ರೈತ ವಿರೋಧಿ ಧೋರಣೆಗೆ ರೈತಕುಲವು ದಂಗೆ ಏಳುವ ಕಾಲ ದೂರವಿಲ್ಲವೆಂದು ಎಚ್ಚರಿಕೆ ನೀಡಿದರು.
Kshetra Samachara
21/12/2024 03:57 pm