ಕೋಲಾರ : ಬಂಗಾರಪೇಟೆ ತಾಲ್ಲೂಕಿನ ಬುದಿಕೋಟೆ ಹೋಬಳಿಯ ಯಳೇಸಂದ್ರ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸುಲೋಚನಾ ಶ್ರೀನಿವಾಸ್ ಉಪಾಧ್ಯಕ್ಷರಾಗಿ ಆನಂದ್ ಅವಿರೋಧವಾಗಿ ಆಯ್ಕೆಯಾದರು. ಬಂಗಾರಪೇಟೆ ತಾಲೂಕಿನ ಯಳೇಸಂದ್ರ ಗ್ರಾಮ ಪಂಚಾಯಿತಿಗೆ ಈ ಹಿಂದೆ ಇದ್ದಂತಹ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ರಾಜೀನಾಮೆಯಿಂದ ತೆರವಾಗಿದಂತಹ ಸ್ಥಾನಗಳಿಗೆ ಚುನಾವಣೆಯನ್ನು ನಡೆಸಲಾಯಿತು ,ಯಾರೂ ನಾಮಪತ್ರವನ್ನ ಸಲ್ಲಿಸದ ಕಾರಣ ಇಬ್ಬರೂ ಸಹ ಅವಿರೋಧವಾಗಿ ಆಯ್ಕೆಯಾದರೂ ಎಂದು ಚುನಾವಣಾಧಿಕಾರಿ ರವಿಕುಮಾರ್ ಘೋಷಣೆ ಮಾಡಿದರು.
ನೂತನ ಅಧ್ಯಕ್ಷ ಸುಲೋಚನಾ ಶ್ರೀನಿವಾಸ್ ಮಾತನಾಡಿ, ಗ್ರಾ.ಪಂ ಎಲ್ಲಾ ಸದಸ್ಯರ ಸಹಕಾರದಿಂದ ಅಧ್ಯಕ್ಷೆಯಾಗಿದ್ದು, ಯಾವುದೇ ಅಹಂ ಇಲ್ಲದೆ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸುವೆ. ಬುದ್ದ, ಬಸವ ಮತ್ತು ಅಂಬೇಡ್ಕರ್ ರವರ ಮಾರ್ಗದಲ್ಲಿ ನಡೆಯುತ್ತಾ. ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೂ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಒತ್ತು ನೀಡುತ್ತೇನೆ ಎಂದರು.
Kshetra Samachara
20/12/2024 04:30 pm