ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ- ಕಳೆದ ಚುನಾವಣೆಯಲ್ಲಿ ನಂಬಿಕೆ ದ್ರೋಹದಿಂದ ಸೋತಿದ್ದೇನೆ - ಮಾಜಿ ಸ್ಪೀಕರ್ ರಮೇಶ್ ಕುಮಾರ್

ಕೋಲಾರ - ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲಿನ ಬಳಿಕ ರಾಜಕೀಯದಿಂದ ದೂರ ಉಳಿದಿದ್ದ ಮಾಜಿ ಶಾಸಕ ರಮೇಶ್​ ಕುಮಾರ್ ಮತ್ತೆ ಕಾಣಿಸಿಕೊಂಡಿದ್ದಾರೆ. ಕೋಲಾರದ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಜನ್ನಘಟ್ಟ ವೆಂಕಟಮುನಿಯಪ್ಪ ಒಂದನೇ ವರ್ಷದ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು,.

ರಮೇಶ್ ಕುಮಾರ್ ಅವರು ಇತ್ತೀಚೆಗೆ ಯಾರ ಕೈಗೂ ಸಿಗುವುದಿಲ್ಲ ಎಂದು ಬಹಳ ಜನ ಮಾತಾಡ್ತಾರೆ. ಎಲ್ಲೂ ಬರುವುದೇ ಇಲ್ಲ. ಅಂತಾರೆ, ಆದ್ರೆ ಜೀವನದಲ್ಲಿ ಸೋತಿದ್ದೇನೆ, ಬದುಕಿನಲ್ಲಿ ಸೋತಾಗಿದೆ. ಮದುವೆ ಮುಂಜಿ, ರಥೋತ್ಸವ ಅದು ಇದು ಅಂತಾ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳಬಹುದಿತ್ತು. ಮತ್ತೆ ಇನ್ನೊಂದು ಚುನಾವಣೆಗೆ ನಿಲ್ಲೋ ಆಸೆ ಇದ್ರೆ ಮಾತ್ರ, ಬಿಳಿ ಶರ್ಟ್ ಹಾಕಿಕೊಂಡು ಕಾಣಿಸಬಹುದಿತ್ತು. ಆದ್ರೆ ಜೀವನದಲ್ಲಿ ಸೋತೆ, ಚುನಾವಣೆಯಲ್ಲಿ ಸೋತಾಗಿದೆ ಎಂದು ಬೇಸರ ಹೊರ ಹಾಕಿದರು.

ಚುನಾವಣೆಯಲ್ಲಿ ಸೋತು ನಾಲ್ಕಾಗಿತ್ತು. 5ನೇಯದು ಈ ಬಾರಿ ಆಗೋಯ್ತು. ಯಾಕೆ ಸೋತೆ ಅಂದ್ರೆ ನಂಬಿಕೆ ದ್ರೋಹ, ಜೊತೆಗೆ ಇದ್ದು, ಕೆಲಸ ಮಾಡಿ ಎಲ್ಲಾ ಸರಿ ಎಂದು ಹೇಳಿದವರು. ಗೊತ್ತೇ ಆಗಿಲ್ಲ. ನನಗೆ ಯಾರೆಲ್ಲಾ ಮಹಾನುಭಾವರಿಗೆ ಕೃತಜ್ಞತೆಗಳು ಅರ್ಪಿಸಬೇಕು ಎಂದು ಹೇಳಿದರು.

Edited By : Vinayak Patil
PublicNext

PublicNext

16/12/2024 08:45 pm

Cinque Terre

34.73 K

Cinque Terre

0

ಸಂಬಂಧಿತ ಸುದ್ದಿ