ಮಾಲೂರು: ಉತ್ತರಾಖಂಡ ರಾಜ್ಯದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿಗಳಿಗೆ ಕರ್ನಾಟಕ ರಾಜ್ಯದಿಂದ ಪ್ರತಿನಿಧಿಸಿರುವ ಕ್ರೀಡಾಪಟುಗಳಿಗೆ ಮಾಲೂರು ತಾಲ್ಲೂಕಿನ ಶಾಸಕ ಕೆ ವೈ ನಂಜೇಗೌಡ ಅವರು ಶುಭ ಕೋರಿದರು.
ಪಟ್ಟಣದಲ್ಲಿ ಕ್ರೀಡಾಪಟುಗಳನ್ನು ಭೇಟಿ ಮಾಡಿ ಶುಭ ಕೋರಿ ಮಾತನಾಡಿದ ಅವರು, ಇಂದು ರಾಜ್ಯದ ವಿವಿಧ ಕಡೆಯಿಂದ ಬಂದಿರುವ ಎಲ್ಲಾ ಕಬ್ಬಡಿ ಕ್ರೀಡಾಪಟುಗಳಿಗೆ ತಾಲೂಕಿನಲ್ಲಿ ಎಲ್ಲಾ ರೀತಿಯ ಸಕಲ ಸೌಕರ್ಯಗಳನ್ನು ಒದಗಿಸಲಾಗಿದೆ ಮುಂದಿನ ಉತ್ತರಖಂಡ ನಲ್ಲಿ ನಡೆಯುವ ರಾಜ್ಯಮಟ್ಟದ ಕಬ್ಬಡಿ ಕ್ರೀಡೆಯಲ್ಲಿ ಉತ್ತಮವಾದ ಆಟವನ್ನು ಆಡಿ ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಉತ್ತಮ ಹೆಸರನ್ನು ತರಬೇಕೆಂದು ಕ್ರೀಡಾಪಟುಗಳಿಗೆ ಶುಭ ಕೋರಿದ್ದಾರೆ ಈ ಸಮಯದಲ್ಲಿ ಜನಪ್ರತಿನಿದಿಗಳು, ಮುಖಂಡರು ಹಾಗೂ ತರಬೇತಿದಾರರು ಮತ್ತು ಕ್ರೀಡಾ ಪಟುಗಳು ಹಾಜರಿದ್ದರು.
PublicNext
26/12/2024 04:03 pm