ಕೋಲಾರ - ಕೋಲಾರ ನಗರದ ಆರೋಗ್ಯ ಇಲಾಖೆಗೆ ಭೇಟಿ ನೀಡಿ ಆರೋಗ್ಯ ಇಲಾಖೆಯ ಪ್ರಗತಿಯ ಮಾಹಿತಿ ಪಡೆದುಕೊಂಡ ಆಂದ್ರದ ಸಿಎಂ ಪುತ್ರ, ಮಾನವ ಸಂಪನ್ಮೂಲ ಸಚಿವ ನಾರಾ ಲೋಕೇಶ್. ಹಾಗೂ ಆಂದ್ರದ ಆರೋಗ್ಯ ಸಚಿವ ಸತ್ಯಕುಮಾರ್. ನಗರದ ಆರೋಗ್ಯ ಇಲಾಖೆ ಕಚೇರಿಗೆ ಭೇಟಿ ನೀಡಿ ಟಾಟಾ ಟ್ರಸ್ಟ್ ವತಿಯಿಂದ ನಿರ್ಮಿಸಿರುವ ಡಿಜಿಟಲ್ ನರ್ವ್ ಸೆಂಟರ್ ಯಾವ ರೀತಿ ಕಾರ್ಯ ನಿರ್ವಹಿಸುತ್ತಿದೆ ಎಂದು ಆರೋಗ್ಯ ಇಲಾಖೆಯಿಂದ ರೋಗಿಗಳ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕಿದರು. ಅಲ್ಲದೇ ಇದೇ ಮಾದರಿಯಲ್ಲಿ ಆರೋಗ್ಯ ಕೇಂದ್ರವನ್ನು ಆಂದ್ರದಲ್ಲಿ ಮಾಡಲು ಚಿಂತನೆ ಮಾಡಿದರು.
Kshetra Samachara
16/12/2024 04:21 pm