ನವದೆಹಲಿ: ಕಳೆದ ವರ್ಷದ ಏಪ್ರಿಲ್ ಹಾಗೂ ಜೂನ್ ತಿಂಗಳ ಮಧ್ಯೆ ದೇಶದಲ್ಲಿ ನಿರುದ್ಯೋಗ ಪ್ರಮಾಣ 26%ರಷ್ಟು ಹೆಚ್ಚಾಗಿದೆ. ಕೊರೊನಾ ಎರಡನೇ ಅಲೆಯೂ ಇದಕ್ಕೆ ಕಾರಣ ಎಂಬುದು ಸಮೀಕ್ಷೆಯೊಂದರ ವರದಿ ಪ್ರಕಾರ ತಿಳಿದುಬಂದಿದೆ.
ಇದರಲ್ಲಿ ಕೇರಳ ಮೊದಲ ಸ್ಥಾನದಲ್ಲಿದ್ದು 15ರಿಂದ 29 ವಯಸ್ಸಿನೊಳಗಿನವರಲ್ಲಿ 47% ನಿರುದ್ಯೋಗ ಇದೆ. ಒಟ್ಟು 22 ರಾಜ್ಯಗಳಲ್ಲಿ ಈ ಸಮೀಕ್ಷೆ ಕೈಗೊಳ್ಳಲಾಗಿದೆ. ಇನ್ನು ಕೊರೊನಾ ಮೊದಲ ಅಲೆಯ ವೇಳೆ ದೇಶದಲ್ಲಿ 34.7%ನಷ್ಟು ನಿರುದ್ಯೋಗ ಪ್ರಮಾಣ ಇತ್ತು. ಇದರಲ್ಲಿ ದೆಹಲಿ, ಕರ್ನಾಟಕ, ಅಸ್ಸಾಮ್, ಪಂಜಾಬ್ ಮತ್ತು ಒಡಿಶಾ ರಾಜ್ಯಗಳು ಮುಂಚೂಣಿಯಲ್ಲಿವೆ.
ಇನ್ನು ಗುಜರಾತ್‌ನಲ್ಲಿ ಕೋವಿಡ್ ಮೊದಲ ಅಲೆಯ ವೇಳೆ 7.7% ನಷ್ಟಿದ್ದ ನಿರುದ್ಯೋಗ ಪ್ರಮಾಣ ಸದ್ಯ 11.6%ನಷ್ಟಿದೆ.
PublicNext
17/03/2022 01:15 pm