ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾರತೀಯ ವಿದ್ಯಾರ್ಥಿಗಳನ್ನು ಉಕ್ರೇನ್ ಒತ್ತೆಯಾಳಾಗಿರಿಸಿಕೊಂಡಿದೆ – ರಷ್ಯಾ ಆರೋಪ

ಕೀವ್ : ಉಕ್ರೇನ್ ಪಡೆಗಳು ಖಾರ್ಕಿವ್ ನಗರದಲ್ಲಿ ದೊಡ್ಡ ಸಂಖ್ಯೆಯ ಭಾರತೀಯ ವಿದ್ಯಾರ್ಥಿಗಳನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿವೆ ಎಂದು ರಷ್ಯಾ ಆರೋಪ ಮಾಡಿದೆ.ಖಾರ್ಕಿವ್ ನಿಂದ ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ರಷ್ಯಾ ಪ್ರಯತ್ನಿಸುತ್ತಿರುವಾಗ ಉಕ್ರೇನ್ ಪಡೆಗಳು ಭಾರತೀಯರನ್ನು ಒತ್ತೆಯಾಳಾಗಿ ಇರಿಸಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಮಾಹಿತಿಯ ಪ್ರಕಾರ, ಖಾರ್ಕಿವ್ ನಲ್ಲಿ, ಉಕ್ರೇನಿಯನ್ ಅಧಿಕಾರಿಗಳು ಉಕ್ರೇನಿಯನ್ ಪ್ರದೇಶವನ್ನು ತೊರೆದು ಬೆಲ್ಗೊರೊಡ್ ಗೆ ಹೋಗಲು ಬಯಸುವ ಭಾರತೀಯ ವಿದ್ಯಾರ್ಥಿಗಳ ದೊಡ್ಡ ಗುಂಪನ್ನು ಬಲವಂತವಾಗಿ ಬಂಧಿಸುತ್ತಿದ್ದಾರೆ.” ಎಂದು ಮೇಜರ್ ಜನರಲ್ ಇಗೊರ್ ಕೊನಾಶೆಂಕೋವ್ ಹೇಳಿದ್ದಾರೆ.

“ಭಾರತೀಯ ನಾಗರಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲು ಸಶಸ್ತ್ರ ಪಡೆಗಳು ಸಿದ್ಧವಾಗಿವೆ. ಭಾರತದ ಹೇಳಿದಂತೆ ಅವರನ್ನು ತಮ್ಮ ಮಿಲಿಟರಿ ಸಾರಿಗೆ ವಿಮಾನಗಳು ಅಥವಾ ಭಾರತೀಯ ವಿಮಾನಗಳೊಂದಿಗೆ ರಷ್ಯಾದ ಪ್ರದೇಶದಿಂದ ಮನೆಗೆ ಕಳುಹಿಸಬೇಕಿದೆ” ಎಂದು ಹೇಳಿದ್ದಾರೆ.

ಇತ್ತ ಭಾರತ, ಪಾಕಿಸ್ತಾನ, ಚೀನಾ ಮತ್ತು ಇತರ ದೇಶಗಳ ವಿದ್ಯಾರ್ಥಿಗಳು “ರಷ್ಯಾದ ಸಶಸ್ತ್ರ ಆಕ್ರಮಣದ ಒತ್ತೆಯಾಳುಗಳಾಗಿದ್ದಾರೆ” ಎಂದು ಉಕ್ರೇನ್ ಆರೋಪಿಸಿದೆ.

Edited By : Nirmala Aralikatti
PublicNext

PublicNext

03/03/2022 10:23 am

Cinque Terre

51.92 K

Cinque Terre

2

ಸಂಬಂಧಿತ ಸುದ್ದಿ