ಹೊಸದಿಲ್ಲಿ; ಅಮೆರಿಕಾಗೆ ತೆರಳಲು ಬಯಸುವವರು ಈ ಅಂಶ ತಿಳಿಯಿರಿ.ಅಮೆರಿಕಾದ ಸ್ಟೇಟ್ ಡಿಪಾರ್ಟ್ಮೆಂಟ್ ವೆಬ್ ಸೈಟ್ ನಲ್ಲಿ ವೀಸಾಗೆ ಕಾಯುವಿಕೆ ಅವಧಿ ಒಂದೂವರೆ ವರ್ಷ ಎಂದು ಬರೆಯಲಾಗಿದ್ದು, ಇದರಂತೆಯೇ ಆದರೆ ಈಗ ವೀಸಾಗೆ ಅರ್ಜಿ ಸಲ್ಲಿಸಿದವರಿಗೆ ಮಾರ್ಚ್-ಎಪ್ರಿಲ್ 2024 ರಲ್ಲಿ ವೀಸಾ ದೊರೆಯಬಹುದು.
ಹೊಸದಿಲ್ಲಿಯಲ್ಲಿರುವ ಅಮೆರಿಕಾ ಕಾನ್ಸುಲೇಟ್ ನಲ್ಲಿ ವೀಸಾ ಅಪಾಯಿಂಟ್ಮೆಂಟ್ ಗಾಗಿ ಸರಾಸರಿ ಕಾಯುವಿಕೆ ಸಮಯ 522 ದಿನಗಳಾದರೆ ಸ್ಟೂಡೆಂಟ್ ವೀಸಾಗಳಿಗೆ ಈ ಅವಧಿ 471 ದಿನಗಳಾಗಿವೆ.
ಮುಂಬೈನಲ್ಲಿ ಅಮೆರಿಕಾ ವೀಸಾ ಅಪಾಯಿಂಟ್ಮೆಂಟ್ ಗಾಗಿ 517 ದಿನಗಳು ಹಾಗೂ ಸ್ಟೂಡೆಂಟ್ ವೀಸಾಗಾಗಿ 10 ದಿನ ಕಾಯಬೇಕು. ದಿಲ್ಲಿಯಲ್ಲಿ ನಾನ್-ಇಮ್ಮಿಗ್ರೆಂಟ್ ವೀಸಾಗಾಗಿ 198 ದಿನಗಳ ಹಾಗೂ ಮುಂಬೈಯಲ್ಲಿ 72 ದಿನಗಳಾಗಿವೆ.
ಚೆನ್ನೈಯಲ್ಲಿ ವಿಸಿಟರ್ ವೀಸಾಗಾಗಿ 557 ದಿನ, ನಾನ್-ಇಮ್ಮಿಗ್ರೆಂಟ್ ವೀಸಾಗಳಿಗಾಗಿ 185 ದಿನಗಳಾಗಿವೆ. ಹೈದರಾಬಾದ್ ನಲ್ಲಿ ವಿಸಿಟರ್ ವೀಸಾಗೆ 518 ದಿನಗಳಾಗಿವೆ.
ಇನ್ನು ಈ ದೀರ್ಘ ಕಾಯುವಿಕೆ ಅವಧಿ ಬಗ್ಗೆ ಪ್ರತಿಕ್ರಿಯಿಸಿದ ಅಮೆರಿಕಾದ ರಾಯಭಾರ ಕಚೇರಿ, ಈ ಸಮಯವನ್ನು ಕಡಿಮೆ ಮಾಡಲು ಕ್ರಮಕೈಗೊಳ್ಳಲಾಗುತ್ತಿದೆ ಹಾಗೂ ಈ ನಿಟ್ಟಿನಲ್ಲಿ ಹೆಚ್ಚುವರಿ ಸಿಬ್ಬಂದಿಗಳನ್ನು ನೇಮಕಗೊಳಿಸಲಾಗುತ್ತಿದೆ ಹಾಗೂ ಹೊಸದಾಗಿ ತರಬೇತಿ ಪಡೆದ ಉದ್ಯೋಗಿಗಳು ಭಾರತ ಸಹಿತ ವಿವಿಧ ಕಾನ್ಸುಲೇಟ್ ಗಳಿಗೆ ನೇಮಕಗೊಳ್ಳುತ್ತಿದ್ದಾರೆ ಎಂದು ಹೇಳಿದೆ.
PublicNext
20/08/2022 07:21 am